ವಾಸ್ತವ ಪ್ರತಿವಾಸ್ತವ

Author : ಎಸ್. ದಿವಾಕರ್‌

Pages 300

₹ 375.00




Year of Publication: 2025
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

`ವಾಸ್ತವ ಪ್ರತಿವಾಸ್ತವ' ಎಸ್. ದಿವಾಕರ್ ಅವರ ಸಾಹಿತ್ಯ, ಸಂಸ್ಕೃತಿ ಮತ್ತು ವಿಮರ್ಶೆ ಕುರಿತ ಸಂಕಲನವಾಗಿದೆ. ಕೃತಿಯ ಕುರಿತಂತೆ ರಘುನಾಥ ಚ.ಹ ಅವರು ಹೀಗೆ ಹೇಳಿದ್ದಾರೆ; 'ವಾಸ್ತವ ಪ್ರತಿವಾಸ್ತವ' ಕೃತಿ ಕಥೆ, ಕವಿತೆ, ಪ್ರಬಂಧಗಳಿಂದ ಕನ್ನಡ ಸಾಹಿತ್ಯದ ದಿಗಂತಗಳನ್ನು ವಿಸ್ತರಿಸುತ್ತಲೇ ಇರುವ ಎಸ್. ದಿವಾಕರ್ ಅವರ ಈ ಕೃತಿ, ಓದಿನ ಹೊಳಯಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳುವ ಸೃಜನಶೀಲ ಬರಹಗಾರನೊಬ್ಬನ ಮಹತ್ವಾಕಾಂಕ್ಷೆಯ ಅಭಿವ್ಯಕ್ತಿಯಂತಿದೆ. ಒಂದು ಒಳ್ಳೆಯ ಸಾಹಿತ್ಯ ಕೃತಿ ಅಥವಾ ಕಲಾಕೃತಿಯನ್ನು ಹೇಗೆ ನೋಡಬೇಕು ಎನ್ನುವ ಅರಿವನ್ನು ಸಹೃದಯರಲ್ಲಿ ಉದ್ದೀಪಿಸುವ ಬರಹಗಳಿವು, ದಿವಾಕರ್ ಅವರು ತಮ್ಮ ಬರಹಗಳಿಗೆ ಸಂಬಂಧಿಸಿದಂತೆ ಸಾಹಿತ್ಯ, ವಿಮರ್ಶೆ ಮತ್ತು ಸಂಸ್ಕೃತಿ ಎನ್ನುವ ವಿಶೇಷಣಗಳನ್ನು ಬಳಸಿದ್ದಾರಾದರೂ, 'ವಿಮರ್ಶೆ' ಅಥವಾ ಸಂಸ್ಕೃತಿ ಚಿಂತನೆ' ಎನ್ನುವಂಥ ಹಣೆಪಟ್ಟಿಗಳ ಚೌಕಟ್ಟಿಗೆ ನಿಲುಕದಿರುವುದು ದಿವಾಕರ್ ಬರಹಗಳ ಅನನ್ಯತೆ, ವಿಮರ್ಶೆಯ ಪಾರಿಭಾಷಿಕ ಚೌಕಟ್ಟು ಹಾಗೂ ಚಿಂತನೆಯ ಸೋಗಿನ ಗಾಂಭೀರ್ಯದಿಂದ ಮುಕ್ತವಾದ ಈ ಬರಹಗಳು ಸಾಹಿತ್ಯದ ಮೂಲಕ ಜೀವನಸೌಂದರ್ಯ ಕಾಣಬಯಸುವವರಿಗೆ ರಸದ ಒರತೆಗಳಂತಿದೆ; ಕನ್ನಡ ಹಾಗೂ ವಿಶ್ವಸಾಹಿತ್ಯದ ಅತ್ಯುತ್ತಮ ಕೃತಿ ಹಾಗೂ ಮನಸ್ಸುಗಳನ್ನು ಪರಿಚಯಿಸುತ್ತಿವೆ. ದಿವಾಕರ್ ಬರವಣಿಗೆಯ ವಿಶಿಷ್ಟ ಲಕ್ಷಣವಾದ ಹಾಗೂ ಅವರಿಗಷ್ಟೇ ಸಾಧ್ಯವಾದ ಪ್ರಯೋಗಶೀಲತೆ ಈ ಸಂಕಲನದ ಬರಹಗಳಲ್ಲೂ ಇದೆ. ಓದುಗರನ್ನು 'ಪುಸ್ತಕದ ಓಣಿ'ಗಳಲ್ಲಿ ಕೈ ಹಿಡಿದು ನಡೆಸುವಂತಿರುವ ಈ ಬರಹಗಳು. ಸಾಹಿತ್ಯಪ್ರವೇಶದ ಕಿಂಡಿಗಳನ್ನೂ ಕಂಡಿಗಳನ್ನೂ ಸಹೃದಯರಿಗೆ ಕರುಣಿಸುವಂತಿವೆ. ವಿಮರ್ಶೆ ಹಾಗೂ ಚಿಂತನೆ ವಿರಳವಾಗಿರುವ ದಿನಗಳಲ್ಲಿ ಎರಡಕ್ಕೂ ಘನತೆ ತಂದುಕೊಡುವ ಪ್ರಯತ್ನದ ರೂಪದಲ್ಲಿ ದಿವಾಕರ್ ಅವರ 'ವಾಸ್ತದ ಪ್ರತಿವಾಸ್ತವ' ಕೃತಿಗೆ ವಿಶೇಷ ಮಹತ್ವವಿದೆ. ರ 

  

About the Author

ಎಸ್. ದಿವಾಕರ್‌
(28 November 1944)

ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು.  ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್‌, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ  ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...

READ MORE

Related Books