ಸಾಹಿತ್ಯ ಮತ್ತು ಸಾಹಿತ್ಯೇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹದಿನಾರು ವೈವಿಧ್ಯಪೂರ್ಣ ವ್ಯಕ್ತಿಚಿತ್ರಗಳ ಸಂಕಲನ ಇದು. ಸಾಹಿತ್ಯ ವಿಮರ್ಶೆ, ಸಾಮಾಜಿಕ ದಾಖಲೆ, ಜೀವನ ಚರಿತ್ರೆ, ಮಾಹಿತಿ ಕೋಶ ಹೀಗೆ ಓದುಗರಿಗೆ ಆಪ್ತವಾಗುವಂತೆ ವ್ಯಕ್ತಿಚಿತ್ರಗಳನ್ನು ಲೇಖಕರು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಎಸ್. ಆರ್ ವಿಜಯಶಂಕರ ಅವರ ‘ಒಡನಾಟ' ವ್ಯಕ್ತಿಚಿತ್ರಗಳ ಸಂಕಲನ ಪ್ರಕಟವಾಗಿ ಹತ್ತು ವರುಷಗಳ ಬಳಿಕ ಇದೀಗ ಪ್ರಕಟವಾಗುತ್ತಿದೆ.
ಹಿರಿಯ ವಿಮರ್ಶಕ ಸಿ.ಎನ್. ರಾಮಚಂದ್ರನ್ ಅವರು ’ಒಂದು ಕೇಂದ್ರಾಶಯದ ಸುತ್ತ ತಾವು ಮಂಡಿಸುವ ವಿಚಾರ ಅಥವಾ ಆಶಯಗಳ ವೈಚಾರಿಕ ಹಿನ್ನೆಲೆಯನ್ನು ಅವರು ತಮ್ಮ ಲೇಖನಗಳಲ್ಲಿ ಗುರುತಿಸುತ್ತಾರೆ. ಸಾಹಿತ್ಯ, ಸಂಗೀತ, ಕಾನೂನು, ಯಕ್ಷಗಾನ, ಯಾವುದೇ ಕ್ಷೇತ್ರವಿರಲಿ ಅಥವಾ ಸಾಂಸ್ಕೃತಿಕ ಕಾರ್ಯವಾಗಲಿ, ಅವುಗಳಿಗೆ ರಾಜಕೀಯ-ಸಾಮಾಜಿಕ ಹಿನ್ನೆಲೆಯಿರುತ್ತದೆ ಎಂಬ ಅರ್ಥಪೂರ್ಣ ಅಂಶವನ್ನು ವಿಜಯಶಂಕರ ಗುರುತಿಸುತ್ತಾರೆ. ಯಾವುದೇ ಸಂಗತಿ ಅಥವಾ ವ್ಯಕ್ತಿಯ ಬಗ್ಗೆ ಬರೆಯುವಾಗಲೂ ವಿಜಯಶಂಕರ ತಮ್ಮ ಇಡೀ ಓದನ್ನು ಅದಕ್ಕೆ ಪೂರಕವಾಗಿ ದುಡಿಸಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಸಾಹಿತ್ಯ ವಿಮರ್ಶೆ, ಸಾಮಾಜಿಕ ದಾಖಲೆ, ಜೀವನ ಚರಿತ್ರೆ, ಮಾಹಿತಿ ಕೋಶ ಇತ್ಯಾದಿ ನಿನ್ನ ಪ್ರಭೇದಗಳ ಲಕ್ಷಣಗಳನ್ನು ಒಟ್ಟಿಗೆ ತಂದು ಅತ್ಯಂತ ಆಪ್ತವಾಗಿ ಪ್ರೀತಿಯಿಂದ ಬರೆಯಲ್ಪಟ್ಟಿರುವ ಈ ವ್ಯಕ್ತಿಚಿತ್ರಗಳು ವಿಜಯಶಂಕರ ಅವರ ಪಕ್ವ ಬರವಣಿಗೆ ಹಾಗೂ ಉದಾರ ದೃಷ್ಟಿಕೋನದ ವಿಶೇಷ ನಿದರ್ಶನಗಳು, ವ್ಯಕ್ತಿಗಳ ಕೃತಿ-ಸಾಧನೆಗಳು ಹಾಗೂ ಒಡನಾಟ ಇವೆರಡನ್ನೂ ವಿಜಯಶಂಕರ ಅಕ್ಷರ ಚಿತ್ರಗಳು ಒಂದಡೆ ತರುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ, ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ. ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ. ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...
READ MORE