ಕೃತಿನೋಟ

Author : ಶ್ಯಾಮಸುಂದರ ಬಿದರಕುಂದಿ

Pages 128

₹ 12.00




Year of Publication: 1986
Published by: ಆಲೋಚನ ಪ್ರಕಾಶನ
Address: ಮಸಾರಿ, ಗದಗ-582101

Synopsys

ಕೃತಿ ನೋಟ ಕೃತಿಯು ಶ್ಯಾಮಸುಂದರ ಬಿದರಕುಂದಿ ಅವರ ವಿಮರ್ಶೆ ಸಂಕಲನ. ಕಣವಿಯವರ ಕಾವ್ಯದ ನವ್ಯ ಮಾರ್ಗ, 1983ರ ಗಮನಾರ್ಹ ಕಾದಂಬರಿಗಳು, ಎನ್ಕೆ ಅವರ ಮೊಟ್ಟಮೊದಲ ಕಾದಂಬರಿ, ಜ್ವಲಂತ ಒಂದು ವಿಚಾರ ಗುಚ್ಛ, ಪ್ರಗತಿಪರ ದೇಶಗಳ ಹೃದ್ಯ ಕತೆಗಳು, ಅನಕೃ ಅವರ ಮಹತ್ವದ ಕಾದಂಬರಿಗಳು ಹಾಗೂ ಪತ್ತೇದಾರಿ ಕಾದಂಬರಿಗಳಲ್ಲಿ ಸಾಹಿತ್ಯಕ ಅಂಶಗಳು ಶೀರ್ಷಿಕೆಯ ಅಧ್ಯಾಯಗಳಿವೆ. ಸಾಹಿತ್ಯದ ಏರುಪೇರುಗಳನ್ನು ವೀಕ್ಷಿಸುತ್ತಲೇ ಬೇರೆ ಬೇರೆ ಸಮಯದಲ್ಲಿ ಬರೆಯಲಾದ ವಿಮರ್ಶೆ ಲೇಖನಗಳನ್ನು ಸಂಗ್ರಹಿಸಿ ಕೊಡಲಾಗಿದೆ.

About the Author

ಶ್ಯಾಮಸುಂದರ ಬಿದರಕುಂದಿ
(18 May 1947)

ಕವಿ, ವಿಮರ್ಶಕ, ನಿವೃತ್ತ ಪ್ರಾಧ್ಯಾಪಕರಾಗಿರುವ ಡಾ. ಶ್ಯಾಮಸುಂದರ ಬಿದರಕುಂದಿ ಅವರು ಸದ್ಯ ಹುಬ್ಬಳ್ಳಿ  ನಿವಾಸಿಯಾಗಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ., ಪಿಎಚ್‌.ಡಿ. ಪಡೆದಿರುವ ಅವರು ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು.  ಕೃತಿಗಳು: ಅಜ್ಜಗಾವಲು, ಅಲ್ಲಮ ಪ್ರಭುವಾದ, ಬರುವುದೇನುಂಟೊಮ್ಮೆ, ತಲೆ ಎತ್ತಿ ಶರಣು (ಕವನ ಸಂಕಲನ), ಕೃತಿ ನೋಟ, ಅಚ್ಚು ಕಟ್ಟು, ನೆಲೆಗಟ್ಟು, ಪ್ರಸಂಗೋಚಿತ (ವಿಮರ್ಶೆ), ನವ್ಯಮಾರ್ಗದ ಕಾದಂಬರಿಗಳು (ಪಿಎಚ್.ಡಿ. ಮಹಾಪ್ರಬಂಧ), ಗಂಧಕೊರಡು, ಪ್ರಬಂಧಪ್ರಪಂಚ, ಸ್ವಾತಂತ್ರ್ಯದ ಸವಿನೀರು, ಕರ್ಕಿಯವರ ಸಮಗ್ರ ಸಾಹಿತ್ಯ ( ಸಂಪಾದಿತ), ಗರೂಡ ಶ್ರೀಪಾದರಾವ; ಶಂಕರ ಮೊಕಾಶಿ ಪುಣೇಕರ; ಫ.ಶಿ. ಭಾಂಡಗೆ (ಇತರೆ) ...

READ MORE

Related Books