ಸಾಹಿತಿ ವಿ. ಸೀತಾರಾಮಯ್ಯ ಅವರ ಕೃತಿ ಕವಿ-ಕಾವ್ಯ-ದೃಷ್ಟಿ, ಈ ಕೃತಿಯು ವಿಮರ್ಶಾತ್ಮಕ ಪ್ರಬಂಧಗಳ ಸಂಕಲನವಾಗಿದೆ. ಇಲ್ಲಿಯ ಬಹುತೇಕ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಯಲ್ಲಿ ಕವಿ-ಕಾವ್ಯ-ದೃಷ್ಟಿ, ಕಲೆಯ ಪ್ರಪಂಚ, ಸಾಹಿತ್ಯ ವಿಮರ್ಶೆ, ಸ್ಪೂರ್ತಿ ಮತ್ತು ಕಲೆಗಾರಿಕೆ, ಭಾರತ ಸಂಸ್ಕೃತಿ ಮತ್ತು ಧರ್ಮ, ಭಾರತಗಳ ಕೃಷ್ಣ, ಅಲ್ಲಮಪ್ರಭು, ಶ್ರೀ ಚೆನ್ನಕೇಶವನ ಅಂತಃಪುರ ಗೀತೆ, ಶ್ರೀನಿವಾಸರ ಕವಿತೆ, ಆರೋಹಣ, ಕಲಾಕೃತಿ ಅರ್ಥ ಹೀಗೆ ವಿವಿಧ ಶೀರ್ಷಿಕೆಗಳಡಿ ವಿಮರ್ಶಾ ಲೇಖನಗಳನ್ನು ಇಲ್ಲಿ ಸಂಕಲಿಸಲಾಗಿದೆ.
ಕವಿ, ವಿದ್ವಾಂಸ, ವಿಮರ್ಶಕ, ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ 1899ರ ಅಕ್ಟೋಬರ್ 2ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಬಿ. ಎ. (1920), ಎಂ. ಎ. (1922) ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು. ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯ (1923) ರಾದರು. ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ...
READ MORE