ಜೈಮಿನಿ ಭಾರತವನ್ನು ಹೊಸ ಸೈದ್ಧಾಂತಿಕ ನೆಲೆಯಲ್ಲಿ ಗ್ರಹಿಸಿರುವ ಸಂಪಾದಿತ ಲೇಖನಗಳ ಗುಚ್ಚವೇ ಈ ಕೃತಿಯಾಗಿದ್ದು, ಜೈಮಿನಿ ಭಾರತದ ನಿರ್ಮಾಣ, ವಸ್ತು, ನಿರೂಪಣ ಕ್ರಮ, ಸಂವಹನ, ಅದರ ಓದು, ಅದರ ಪ್ರಕಾರಪಲ್ಲಟ, ಅದರ ಸ್ತೋತ್ರ ವರ್ಗ ಹಾಗೂ ಅದರ ಕುರಿತ ವಿವಿಧ ಅಧ್ಯಯನಗಳ ಬಗ್ಗೆ ಈ ಕೃತಿಯಲ್ಲಿ ಚರ್ಚಿಸಲಾಗಿದೆ. 'ಜೈಮಿನಿ ಭಾರತ' ಕಾವ್ಯವು ಗಮಕ ಪ್ರಕಾರಕ್ಕೆ ಯಕ್ಷಗಾನ ಆಟಗಳ ಸೃಷ್ಟಿಗೆ ಹಾಗೂ ಆಧುನಿಕ ಕಾವ್ಯಗಳ ಮೇಲೆಹೇಗೆ ಪ್ರಭಾವ ಬೀರಿದೆ ಎಂಬ ಅಂತರ್‌ಸಂಬಂಧ ಶೋಧನೆಯನ್ನು ಈ ಕೃತಿಯಲ್ಲಿ ವಿಮರ್ಶಿಸಲಾಗಿದೆ. ಈ ಕೃತಿಯಲ್ಲಿ ಒಳಗೊಂಡಿರುವ ಅಧ್ಯಾಯಗಳೆಂದರೆ: ಜೈಮಿನಿ ಭಾರತದ ಅಧ್ಯಯನಗಳು , ಆಧುನಿಕ ಪೂರ್ವ ಶೈಕ್ಷಣಿಕ ಪಠ್ಯವಾಗಿ ೩. ಕಥೆ ಉಪಕಥೆಗಳ ಅಂತರ್ ಸಂಬಂಧಗಳು , ಪ್ರಭುತ್ವನಗರಗಳ ಅಂತರ್ ಸಂಬಂಧ ಸ್ವರೂಪ , ಪ್ರಭುತ್ವ ಮತ್ತು ಯುದ್ಧಗಳ ತಾತ್ವಿಕ ಸ್ವರೂಪ ,ಸ್ತ್ರೀಲೋಕ ಸ್ತ್ರೀವಾದಿ ಅಧ್ಯಯನ ಮುಖೇನ ,ಜೈಮಿನಿ ಭಾರತ ಮತ್ತು ಯಕ್ಷಗಾನ ಅಂತಃಸಂಬಂಧ , ಜೈಮಿನಿ ಭಾರತ ಬೇಂದ್ರೆ ಮತ್ತು ಕುವೆಂಪು ಅವರ ಮೇಲಾದ ಪ್ರಭಾವ , “ಪರಿಭ್ರಮಣ” ಮತ್ತು “ಶೋಧ” ಕನ್ನಡ ಜೈಮಿನಿ ಭಾರತದ ಒಂದು ಅಧ್ಯಯನ ,ಜೈಮಿನಿ ಭಾರತದ ಅಧ್ಯಯನಗಳ ಸಮೀಕ್ಷೆ
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...
READ MORE