ಕಾಡುವ ಕನ್ನಡ ದನಿಗಳು

Pages 204

₹ 160.00




Published by: ರೂಪಾ ಪ್ರಕಾಶನ
Address: ಮೈಸೂರು
Phone: 9731367262

Synopsys

‘ಕಾಡುವ ಕನ್ನಡ ದನಿಗಳು’ ಕೃತಿಯು ಎಸ್. ತುಕರಾಮ್ ಅವರ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಇಲ್ಲಿ ಕನ್ನಡದ ದನಿಗಳನ್ನು ಒಂದೆಡೆ ಕಾಣಬಹುದು. ಈ ಕೃತಿಯು ಸಾಮಾಜಿಕ ವಿಮರ್ಶೆ ಎಂದು ಹೇಳುದಕ್ಕಿಂತಲೂ ಕನ್ನಡದ ವರ್ತಮಾನದ ಬೆಳವಣಿಗೆಗೆ ಸಾಕ್ಷಿಯಾಗಿರುವಂತಹ ಲೇಖನಗಳೆಂದು ಕರೆಯಬಹುದು. ಇಲ್ಲಿ ಕನ್ನಡವನ್ನು ಅಗಾಧವಾಗಿ ಪ್ರೀತಿಸುವ ವ್ಯಕ್ತಿಗಳಿದ್ದಾರೆ. ಕನ್ನಡ ಮೌಲ್ಯಗಳನ್ನು ಎತ್ತಿ ಹಿಡಿಯುವ ಅವರ ವ್ಯಕ್ತಿತ್ವಗಳಿವೆ ಹಾಗೂ ಅವರ ಮೂಲಕ ಹೊರಹೊಮ್ಮುವ ಕೃತಿಗಳ ಪರಿಚಯವೂ ಇಲ್ಲಿದೆ. ಕೃತಿಯಲ್ಲಿ ಎರಡು ಅಧ್ಯಯನಗಳಿದ್ದು, ಮೊದಲನೇ ಅಧ್ಯಾಯನದಲ್ಲಿ ವ್ಯಕ್ತಿಚಿತ್ರದ ಮೂಲಕ ಕನ್ನಡ ಚಿಂತನೆಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಕೃತಿಗೆ ಬೆನ್ನುಡಿ ಬರೆದಿರುವ ಎಚ್.ಎಸ್. ರೇಣುಕಾರಾಧ್ಯ , ಎಚ್. ತುಕರಾಮ್ ಅವರ ಕಾಡುವ ಕನ್ನಡ ದನಿಗಳು ಕೃತಿಯ ಬರಹಗಳು ಆಳಕ್ಕಿಳಿದು ವಿಶ್ಲೇಷಣೆಗೆ ಒಳಪಡಿಸಿ, ಬಿಸಾಡಬಲ್ಲ ಬೌದ್ದಿಕ ವಿಲಾಸ ಬರಹಗಳಲ್ಲ. ಒಂದು ವಿಷಯಕ್ಕೆ ಮತ್ತೊಂದು ವಿಷಯವನ್ನು ಜೋಡಿಸುತ್ತಾ ಆಲದ ಬಿಳಲುಗಳಂತೆ ಒಂದರೊಡನೆ ಮತ್ತೊಂದು ಸೇರಿ ಹರಡಿಕೊಂಡು, ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಾ ಪ್ರತಿಯೊಂದನ್ನು ತಾಯ್ತನದ ನೆಲೆಯಲ್ಲಿ ನೋಡುವ ಒಂದು ಬಗೆಯ ಸಂಯದ ಮಾದರಿಯವು ಎಂದು ಹೇಳಿದ್ದಾರೆ.

Related Books