ಪರಸ್ಪರ ವಿಮರ್ಶಾತ್ಮಕ ಲೇಖನಗಳು ಉತ್ತಮ ವಿಮರ್ಶಾತ್ಮಕ ಕೃತಿಯಿದು. ಸಂಸ್ಕೃತದ ಪ್ರಾಚೀನ ಪ್ರಸಿದ್ಧ ‘ಮೃಚ್ಛಕಟಿಕ’ ಕುರಿತ ಲೇಖನದಿಂದ ಆರಂಭಗೊಂಡು ರನ್ನ, ಹರಿಹರ, ಜನ್ನ, ಕುಮಾರವ್ಯಾಸ, ಲಕ್ಷ್ಮೀಶ, ಮುದ್ದಣ್ಣ ಮೊದಲಾದ ಸಂಸ್ಕೃತ ಮತ್ತು ಹಳೆಗನ್ನಡ ಕವಿಗಳು ಹಾಗೂ ಮಾಸ್ತಿ, ಡಿವಿಜಿ, ಬೇಂದ್ರೆ, ಗೋಕಾಕ್, ಗೋವಿಂದ್ ಪೈ ಮೊದಲಾದ ಆಧುನಿಕ ನವೋದಯ ಸಾಹಿತಿಗಳ ಕೃತಿಗಳ ವಿಮರ್ಶೆಗಳನ್ನು ಈ ಕೃತಿಯೂ ವಿವರಿಸುತ್ತದೆ . ಇಷ್ಟು ಮಾತ್ರ ಅಲ್ಲದೆ ಕನ್ನಡ ಸಾಹಿತ್ಯದಲ್ಲಿ ಮತ-ಧರ್ಮ, ನವೋದಯ ಕಾವ್ಯದಲ್ಲಿ ಶೃಂಗಾರ, ಮೊದಲಾದ ವಿಷಯಗಳ ಮೇಲೆ ಈ ಕೃತಿ ಬೆಳಕು ಚೆಲ್ಲಿದೆ.
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರು. ಮೂಲತಃ ಶಿವಮೊಗ್ಗದವರಾದ ಅವರು ಸದ್ಯ ಬೆಂಗಳೂರು ನಗರದ ನಿವಾಸಿ. ಅವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಅವರ ಪೂರ್ಣ ಹೆಸರು ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ. ಅವರು ಕವಿ ಮಾತ್ರವಲ್ಲದೆ ವಿಮರ್ಶಕ ಹಾಗೂ ವಾಗ್ಮಿ. ಅವರ ಭಾವಗೀತೆಗಳು ಕ್ಯಾಸೆಟ್‌ಗಳ ಮೂಲಕಜನಪ್ರಿಯಗೊಂಡಿವೆ. ವೃತ್ತ, ಸುಳಿ, ನಿನ್ನೆಗೆ ನನ್ನ ಮಾತು, ದೀಪಿಕಾ ಮತ್ತು ಬಾರೋ ವಸಂತ (ಕವನ ಸಂಗ್ರಹಗಳು), ಹೊರಳು ದಾರಿಯಲ್ಲಿ ಕಾವ್ಯ (ವಿಮರ್ಶೆ), ಜಗನ್ನಾಥ ವಿಜಯ, ಮುದ್ರಾ ಮಂಜೂಷ, ಕರ್ಣ, ಕುಂತಿ, ಕನ್ನಡ ...
READ MORE