ತಂಬೂರಿ ನಾದ- ಸೋಮಕ್ಕ ಮಾದಾಪುರ ಅವರ ಮೊದಲ ವಿಮರ್ಶಾ ಸಂಕಲನ. ಒಟ್ಟು13 ವಿಮರ್ಶಾ ಬರವಣಿಗೆಗಳು ಇಲ್ಲಿವೆ. ಏಳು ಲೇಖನಗಳು ತತ್ವಪದ ಸಾಹಿತ್ಯಕ್ಕೆ, ನಾಲ್ಕು ಲೇಖನಗಳು ನಾಟಕ ಸಾಹಿತ್ಯ ಕುರಿತಾಗಿ, ಒಂದು ಚಂಪೂ, ಮತ್ತೊಂದು ಮಹಿಳಾ ಚಳವಳಿಗೆ ಸಂಬಂಧಿಸಿದ ಲೇಖನಗಳಿವೆ.
ಈ ಬರಹಗಳು ಸಾಹಿತ್ಯ ದ ಬೇರೆ ಬೇರೆ ಪ್ರಕಾರಗಳನ್ನು ವಿಮರ್ಶಿಸುವಾಗ ಮಹಿಳಾ ಸಂವೇದನೆಯನ್ನು ಕೇಂದ್ರವಾಗಿರಿಸಲಾಗಿದೆ. ಪಾಶ್ಚಾತ್ಯ ಸ್ತ್ರೀವಾದಿ ಓದಿನ ಕ್ರಮಗಳನ್ನು ಕನ್ನಡ ಪಠ್ಯಗಳ ಮೇಲೆ ನೇರವಾಗಿ ಆರೋಪಿಸದೇ, ಅದರ ತಿಳಿವಿನೊಡನೆ ನಮ್ಮ ಸಾಂಸ್ಕೃತಿಕ ಸ್ತ್ರೀ ನೆಲೆಯಲ್ಲಿ ವಿಮರ್ಶೆ ಮಾಡಿರುವುದು- ಈ ವಿಮರ್ಶಾ ಬರವಣಿಗೆಯ ಶಕ್ತಿ ಆಗಿದೆ.
ಕನ್ನಡ ಭಕ್ತಿ ಚಳವಳಿಯನ್ನು ಅವಲೋಕಿಸುವಾಗ, ಅವುಗಳಲ್ಲಿಯ ಸಾಮಾಜಿಕತೆ ಎನ್ನುವುದು ಮಹಿಳಾ ಸಂವೇದನೆಯನ್ನು ಒಳಗೊಳ್ಳುವುದಾಗಿದೆ. ಹೀಗೆ ಒಳಗೊಳ್ಳುವಿಕೆಯ ನಾಡಿಮಿಡಿತದ ಸೂಕ್ಷ್ಮತೆಯನ್ನು ತಂಬೂರಿ ನಾದ ಲೇಖನಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಪ್ರಭುತ್ವ ಮತ್ತು ಸಮಾಜ- ಇವುಗಳ ಎದುರಿನಲ್ಲಿ ಮಹಿಳಾ ಸಂವೇದನೆ ಎನ್ನುವುದು ಎಲ್ಲ ಕಾಲಕ್ಕೂ ಸವಾಲಿನ ಕಸಬಾಗಿದೆ.
ಕನ್ನಡ ಚಂಪೂಕಾವ್ಯ, ತತ್ವಪದ, ನಾಟಕ ಪಠ್ಯಗಳ ಮಹಿಳಾ ವ್ಯಾಖ್ಯಾನ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನವಿದೆ. ಈ ಸಂಕಲನಕ್ಕೆ ಪ್ರವೇಶಿಕೆಯ ರೂಪದಲ್ಲಿ ಸಂಶೋಧಕಿ ಶಿವಗಂಗಾ ರುಮ್ಮಾಅವರು ಮುನ್ನುಡಿ ಬರೆದಿದ್ದಾರೆ.
ಭರವಸೆಯ ಕವಯತ್ರಿ, ವಿಮರ್ಶಕಿ ಸೋಮಕ್ಕ ಮಾದಾಪೂರ ಹುಬ್ಬಳ್ಳಿ ತಾಲೂಕಿನ ಹಲ್ಯಾಳದವರು.ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ’ಕನ್ನಡ ತತ್ವಪದಗಳಲ್ಲಿ ಪ್ರಭುತ್ವದ ಪರಿಕಲ್ಪನೆ' ವಿಷಯದಲ್ಲಿ ಸಂಶೋಧನೆ ಪೂರೈಸಿದ್ದಾರೆ. 'ತಂಬೂರಿ ನಾದ' ಅವರ ಮೊದಲ ವಿಮರ್ಶಾ ಬರಹಗಳ ಸಂಕಲನ. ...
READ MORE