`ನನ್ನನ್ನು ನಾನೇ ಕಂಡೆ’ ಅನಕೃ ಅವರ ಸಂಭಾಷಣೆಯ ಕೃತಿಯಾಗಿದೆ. ಕೋಮುವಾದ-ನಿರುದ್ಯೋಗ-ಭಾಷಾ ಸಮಸ್ಯೆಗಳನ್ನು ಐವತ್ತು ವರ್ಷ ಹಿಂದೆ ಚಿಗುರಿನಲ್ಲೇ ಗುರುತಿಸಿದ ಮೇಧಾವಿ ಅನಕೃ ಅವರು ಸ್ವಯಂ- ಸಂದರ್ಶನದ ತಂತ್ರಗಾರಿಕೆಯಿಂದ ಮೈತಾಳಿದ ಎರಡು ಭಾವನೆಗಳು ಸ್ವ-ವಿಮರ್ಶೆಯ ಪರಸ್ಪರ ಸಂಭಾಷಣೆ ನಡೆಸಿರುವ ವಿಶಿಷ್ಠ ಕೃತಿ ನನ್ನನ್ನು ನಾನೇ ಕಂಡೆ.
‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...
READ MOREಹೊಸತು - 2002- ಅಕ್ಟೋಬರ್
ಅ. ನ. ಕೃಷ್ಣರಾಯರದು ೧೯೩೦ರ ದಶಕದಿಂದೀಚೆಗಿನ ಕನ್ನಡ ಸಾಹಿತ್ಯದಲ್ಲಿ ಬಹು ದೊಡ್ಡ ಹೆಸರು. ಅಂದಿನ ಅವರ ಸಾಹಿತ್ಯಕ್ಕೆ ಮಡಿವಂತರ ಕಟು ವಿಮರ್ಶೆಗಳು ಬರುತ್ತಿದ್ದರೂ ಅವರ ವಿಚಾರಗಳು ಸಮಾಜಕ್ಕೆ ಆವರಿಸಿದ್ದ ಮೌಡ್ಯಕ್ಕೆ ಮೂಲಿಕೆಗಳಂತಿದ್ದುವು. ಕೋಮುವಾದ-ನಿರುದ್ಯೋಗ-ಭಾಷಾ ಸಮಸ್ಯೆಗಳನ್ನು ಐವತ್ತು ವರ್ಷ ಹಿಂದೆ ಚಿಗುರಿನಲ್ಲೇ ಗುರುತಿಸಿದ ಮೇಧಾವಿ ಅವರು. ಸ್ವಯಂ- ಸಂದರ್ಶನದ ತಂತ್ರಗಾರಿಕೆಯಿಂದ ಮೈತಾಳಿದ ಎರಡು ಭಾವನೆಗಳು ಸ್ವ-ವಿಮರ್ಶೆಯ ಪರಸ್ಪರ ಸಂಭಾಷಣೆ ನಡೆಸಿವೆ.