ಪಂಪ, ರನ್ನ, ಅಲ್ಲಮ ಪ್ರಭು, ವಿ.ಸೀ, ವಿನಾಯಕ, ಅಕಬರ ಅಲಿ, ಬಿ.ಎ.ಸನದಿ, ಸೋಮಶೇಖರ ಇಮಾಪುರ ಅವರ ಕಾವ್ಯ, ಶಾಂತಿನಾಥ ದೇಸಾಯಿಯವರ ಕಥೆ, ಯಲ್ಲಪ್ಪ ರೆಡ್ಡಿಯವರ ಆತ್ಮ ಚರಿತ್ರೆ, ಶಿಶು ಸಾಹಿತ್ಯ ಕುರಿತು ವಿಶೇಷ ಒಳನೋಟಗಳನ್ನು `ದಿಕ್ಕು ದೆಸೆ' ಕೃತಿಯಲ್ಲಿ ವಿಮರ್ಶಿಸಿದ್ದಾರೆ ಲೇಖಕರು. ಈ ವಿಮರ್ಶಾ ಸಂಕಲನದಲ್ಲಿ ಲೇಖಕರ ಅಗಾಧ ಅಧ್ಯಯನಶೀಲತೆಯನ್ನು, ಬರವಣಿಗೆಯ ಶಿಸ್ತನ್ನು ಒಟ್ಟಾಗಿ ಕಾಣಬಹುದಾಗಿದೆ.
ಲೇಖಕ ಶ್ರೀಪಾದ ನಾರಾಯಣ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮುಗ್ವಾ ಗ್ರಾಮದಲ್ಲಿ 1955 ಮೇ 14ರಂದು ಜನಿಸಿದರು. ವೃತ್ತಿಯಲ್ಲಿ ಅಧ್ಯಾಪಕರಾದ ಅವರು ಕವನ ರಚನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಅವರು ಹಲವಾರು ಬಂಡಾಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ದಿನಕರ ದೇಸಾಯಿ-ಬದುಕು-ಬರಹ (ಮಹಾಪ್ರಬಂಧ), ಮೈತ್ರಿ, ಕಾವ್ಯ, ಕಾವ್ಯನಂದನ (ಕವನ ಸಂಗ್ರಹಗಳು), ಪ್ರಿಯಶರಾವತಿ, ಕಪ್ಪು ಜನರ ಕೆಂಪು ಕಾಶಿ (ಸಂಪಾದನೆ) ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದಾರೆ. ...
READ MORE