ಚಿಂತಕ ಆರ್.ವಿ. ಭಂಡಾರಿ ಅವರು ಬರೆದ ಕೃತಿ-ಕುವೆಂಪು: ದೃಷ್ಟಿ-ಸೃಷ್ಟಿ. ಕೃತಿಗೆ ಮುನ್ನುಡಿ ಬರೆದ ಲೇಖಕ ಎಂ.ಜಿ. ಹೆಗಡೆ ಕುಮಟಾ ಅವರು‘ ಕುವೆಂಪು ಅವರ ‘ಸೃಷ್ಟಿ’ ಯನ್ನು ವ್ಯವಧಾನದಿಂದ ಆ ಸೃಷ್ಟಿಯನ್ನು ಆಗು ಮಾಡಿದ ದೃಷ್ಟಿ’ಯನ್ನು ತಲುಪುವುದು ,ಮತ್ತು ಅದರ ಮೌಲ್ಯಮಾಪನ ಮಾಡುವುದು ಲೇಖಕರ ಉದ್ದೇಶ. ಸಾಹಿತ್ಯವೆಂದರೆ ಏನೆಂಬುದರ ಕುರಿತು ಆರ್. ವಿ. ಭಂಡಾರಿ ಅವರಿಗೆ ಕುವೆಂಪುಗಿಂತ ಭಿನ್ನವಾದ ಮತ್ತು ಖಚಿತವಾದ ನಿಲುವುಗಳಿರುವುದರಿಂದ ಅವರಿಗೆ ಸಹಜವಾಗೇ ಕುವೆಂಪು ದೃಷ್ಟಿಯಲ್ಲಿ ಕೆಲವೆಡೆಯಾದರೂ ಅನುನ್ಯೂನತೆಯ ಕೊರತೆ ಕಂಡಿದೆ. ಕುವೆಂಪು ಅವರ ದೃಷ್ಟಿಯ ಸ್ವರೂಪವನ್ನು, ಸಂದಿಗ್ಧತೆಗಳನ್ನು ವಿವರಿಸಿಕೊಳ್ಳಲು ಆರ್.ವಿ. ಅವರಿಗೆ ಸಾಧ್ಯವಾಗಿದೆ. ಕುವೆಂಪು ಅವರ ಎಲ್ಲ ಕೃತಿಗಳನ್ನು ಸಮಗ್ರವಾಗಿ ಹಾಗೂ ವಿಸ್ತಾರವಾಗಿ ಎಡಪಂಥೀಯ ದೃಷ್ಟಿಯಿಂದ ವಿವೇಚಿಸುವ ಮೊದಲ ಕೃತಿ ‘ಕುವೆಂಪು: ದೃಷ್ಟಿ-ಸೃಷ್ಟಿ’ ಎಂದು ಪ್ರಶಂಸಿಸಿದ್ದಾರೆ.
ಕುವೆಂಪು ಅವರ ಸಮಗ್ರ ನಾಟಕಗಳು, ಕುವೆಂಪು ಕಾವ್ಯ, ಕುವೆಂಪು ಕಥೆ-ಕಾದಂಬರಿಗಳು, ಕುವೆಂಪು: ಮಕ್ಕಳ ಸಾಹಿತ್ಯ, ಕುವೆಂಪು: ಇತರೆ ಗದ್ಯಗಳು, ಕುವೆಂಪು ವೈಚಾರಿಕತೆಯ ಸ್ವರೂಪ ಹಾಗೂ ಕುವೆಂಪು ಕಾವ್ಯ ಮೀಮಾಂಸೆ ಹಾಗೂ ವಿಮರ್ಶೆ ಹೀಗೆ ವಿವಿಧ ಅಧ್ಯಾಯಗಳಡಿ ಕುವೆಂಪು ಅವರ ಸಾಹಿತ್ಯಕ, ಸಾಂಸ್ಕೃತಿಕ ಸೇರಿದಂತೆ ಸಮಗ್ರ ಒಲವು-ನಿಲುವುಗಳನ್ನು ಲೇಖಕರು ವಿಮರ್ಶೆ ಚೌಕಟ್ಟಿನಲ್ಲಿ ಚರ್ಚಿಸಿದ್ದಾರೆ.
ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ...
READ MORE