‘ಕಾರಂತರ ಕಾದಂಬರಿಗಳು’ ಮಾಧವ ಕುಲಕರ್ಣಿ ಅವರ ವಿಮರ್ಶಾತ್ಮಕ ಕೃತಿಯಾಗಿದೆ. ಪ್ರಚಾರ-ಪ್ರಶಸ್ತಿಗಳ ಭರಾಟೆಯ ನಡುವೆ ಇರುವ ಸಾಹಿತ್ಯಾವ ಲೋಕನ ಹಾಗೂ ಸದ್ದಿಲ್ಲದ ಎಲೆಮರೆಯ ಹೂವಿನಂಥ ಸಾಹಿತ್ಯದ ತುಲನೆ – ಇಂದಿನ ವಿಮರ್ಶಕರಿಗಿರುವ ಬಹುದೊಡ್ಡ ಎರಡು ಗೊಂದಲಗಳು, ಸಾಹಿತ್ಯದಲ್ಲಿ ಮೌಲ್ಯ- ಚಿಂತನೆಗಳ ಪ್ರತಿಪಾದನೆ ಮಾಡಿದ ಕಾದಂಬರಿಕಾರ ತನ್ನ ಪಾತ್ರಗಳ ಮೂಲಕ ಅವುಗಳ ವಿಕಾಸಕ್ಕೆ ಖಚಿತ ಧ್ವನಿ ನೀಡಲು ಬದ್ಧನಾಗಿರಬೇಕಾಗುತ್ತದೆ. ಇವನ್ನು ಗಮನದಲ್ಲಿಟ್ಟು ಕಾರಂತರ 14 ಕಾದಂಬರಿಗಳ ಅಪರೂಪದ ವಿಮರ್ಶೆ ಇಲ್ಲಿದೆ.
ಲೇಖಕ, ವಿಮರ್ಶಕ ಮಾಧವ ಕುಲಕರ್ಣಿ ಅವರು ಈಗಿನ ಗದಗ ಜಿಲ್ಲೆ ಮತ್ತು ಆಗಿನ ಧಾರವಾಡ ಜಿಲ್ಲೆಯವರು. ಪ್ರಾಥಮಿಕ ಶಿಕ್ಷಣದಿಂದ ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಪೂರೈಸಿರುವ ಅವರು ಹೈಸ್ಕೂಲು ಶಿಕ್ಷಣವನ್ನು ವಿದ್ಯಾದಾನ ಸಮಿತಿ ಹೈಸ್ಕೂಲು ಗದಗದಲ್ಲಿ ಪೂರ್ಣಗೊಳಿಸಿದ್ದಾರೆ. ತಂದೆ ಎ.ವಿ. ಕುಲಕರ್ಣಿ ಗದುಗಿನ ಮುನ್ಸಿಪಲ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಅಲ್ಲದೇ ಹೈಸ್ಕೂಲು ಶಿಕ್ಷಣದಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕೆ.ಎಸ್.ಎಸ್. ಅಯ್ಯಂಗಾರ್ ಅವರ ಆಡಳಿತ ಕ್ರಮ ಮತ್ತು ಶಿಸ್ತು ನನ್ನ ಮೇಲೆ ಪ್ರಭಾವ ಬೀರಿದವು ಎನ್ನುತ್ತಾರೆ ಮಾಧವ ಕುಲಕರ್ಣಿ. ಗದುಗಿನ ಜೆ.ಟಿ. ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ 1968ರಲ್ಲಿ ಸ್ನಾತಕೋತ್ತರ ...
READ MORE