‘ಸಮಕಾಲೀನ ಕಥೆ ಕಾದಂಬರಿ ಹೊಸ ಪ್ರಯೋಗಗಳು’ ಕೃತಿಯು ಜಿ.ಎಸ್. ಆಮೂರ ಅವರ ಸಮಕಾಲೀನ ಕತೆ ಕಾದಂಬರಿ ಕೃತಿಯಾಗಿದೆ. ಕೃತಿಯಲ್ಲಿ 12 ಅಧ್ಯಾಯಗಳಾದ ಬೆಟ್ಟದ ಜೀವನದಲ್ಲಿ ಸಂವಿಧಾನ ಮತ್ತು ಅರ್ಥವ್ಯಾಪ್ತಿ, ಮರಳಿಮಣ್ಣಿಗೆಯ ಅರ್ಥವಿನ್ಯಾಸ ಕ್ರಮ, ಸಂಸ್ಕಾರಕ್ಕೆ ಅಪ್ರಾತಿನಿಧಿಕ ಪ್ರತಿಕ್ರಿಯೆ, ‘ಗ್ರಾಮಾಯಣ’ದಲ್ಲಿ ನವ್ಯತೆ ಮತ್ತು ಸಂಪ್ರದಾಯ, ಹಳದಿ ಮೀನು : ಕಲೆ ಮತ್ತು ತತ್ತ್ವ, ಮುಕ್ತಿಯಲ್ಲಿ ವೈಯುಕ್ತಿಕ ದರ್ಶನ, ವಂಶವೃಕ್ಷ ಮತ್ತು ಮೌಲ್ಯ ವ್ಯವಸ್ಥೆ, ಶಾಂತಿನಾಥ ದೇಸಾಯಿ ಅವರ ಕತೆಗಳು, ಅನಂತಮೂರ್ತಿಯವರ ‘ಮೌನಿ’ಯಲ್ಲಿ ಹೊಸಬಾಳಿನ ಹಂಬಲ, ಯಶವಂತ ಚಿತ್ತಾಲರ ಕಥಾಸಾಹಿತ್ಯ : ಒಂದು ಸಮೀಕ್ಷೆ, ಸರಸಮ್ಮನ ಸಮಾಧಿ : ಪುನರ್ವಿಮರ್ಶೆ, ‘ಅಳಿದ ಮೇಲೆ’ ಮತ್ತು ಮಾನವತಾವಾದ ಇವೆಲ್ಲ ವಿಚಾರಗಳು ಈ ಕೃತಿಯಲ್ಲಿ ಅಡಕಗೊಂಡಿವೆ.
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE