ಕೋ. ಚೆನ್ನಬಸಪ್ಪ ಅವರು ರಾಷ್ಟ್ರಕವಿ ಕುವೆಂಪು ಬರೆಹಗಳಲ್ಲಿ ವ್ಯಕ್ತವಾಗಿರುವ ವೈಚಾರಿಕತೆ ಮತ್ತು ಸಾಮಾಜಿಕ ನಿಷ್ಠೆಯನ್ನು ಈ ಗ್ರಂಥದಲ್ಲಿ ವಿವರಿಸಿದ್ದಾರೆ. ಕುವೆಂಪು ಅವರ ಸಮಗ್ರ ಗದ್ಯ ಪದ್ಯ ಸಾಹಿತ್ಯವನ್ನು ಸಮಗ್ರ ಅಧ್ಯಯನ ಮಾಡಿದ ಕೋ.ಚೆ. ಅವರು ಅವರು ‘ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ-ಸಾಮಾಜಿಕ ನಿಷ್ಠೆ’ ಕೃತಿಯಲ್ಲಿ ಕುವೆಂಪು ಸಾಹಿತ್ಯದ ಬಹುಮುಖ್ಯ ಆಯಾಮ ಆಗಿರುವ ’ಚಿಂತನೆ’ಯನ್ನು ಅನಾವರಣ ಮಾಡಿದ್ದಾರೆ. ಕುವೆಂಪು ಅವರ ಸಾಹಿತ್ಯ ’ಬುದ್ಧಿ-ಭಾವಗಳ ವಿದ್ಯುದ್ದಾಲಿಂಗನ’. ಭಾವ ಪ್ರಧಾನ ಕಾವ್ಯ ಕೂಡ ವೈಚಾರಿಕತೆಗೆ ಹೊರತಾಗಿಲ್ಲ. ಗದ್ಯ ಪದ್ಯಗಳೆರಡೂ ಸಮಾಜಮುಖಿ ಚಿಂತನೆ ಹಾಗೂ ವೈಚಾರಿಕತೆಗೆ ಹೆಸರುವಾಸಿ. ಕುವೆಂಪು ಅವರ ವೈಚಾರಿಕ ನಿಲುವು ಮತ್ತು ಸಾಮಾಜಿಕ ನಿಷ್ಠೆಗಳೆರಡೂ ವ್ಯಕ್ತವಾಗಿರುವ ಬಗೆಯನ್ನು ಚೆನ್ನಬಸಪ್ಪ ಅವರು ಸೊಗಸಾಗಿ ವಿವರಿಸಿದ್ದಾರೆ.
ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು. 1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ...
READ MORE