ಅನನ್ಯ ಪ್ರತಿಭೆಯ ಪರಿ

Author : ಶಿವರಾಜ ಬ್ಯಾಡರಹಳ್ಳಿ

Pages 488

₹ 500.00




Year of Publication: 2021
Published by: ಕಿರಂ ಪ್ರಕಾಶನ
Address: ನಂ.173, 7ನೇ ಮುಖ್ಯರಸ್ತೆ, 24ನೇ ಸಿ ಕ್ರಾಸ್ ನಾಗರಬಾವಿ ಮುಖ್ಯರಸ್ತೆ, ಗೋವಿಂದರಾಜನಗರ, ಬೆಂಗಳೂರು- 560079

Synopsys

‘ಅನನ್ಯ ಪ್ರತಿಭೆಯ ಪರಿ’ ಡಾ.ಡಿ.ಆರ್. ನಾಗರಾಜ್ ಅವರ ಸಾಹಿತ್ಯ-ಸಂಸ್ಕೃತಿ, ವಿಮರ್ಶೆ, ಸಂಶೋಧನೆ, ಅನುವಾದ ಗ್ರಂಥಗಳ ಕುರಿತ ವಿಮರ್ಶಾ ಬರಹಗಳ ಸಂಕಲನ. ಲೇಖಕ ಡಾ. ಶಿವರಾಜ ಬ್ಯಾಡರಹಳ್ಳಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಡಾ.ಡಿ.ಆರ್. ನಾಗರಾಜ್ ಅವರ ‘ಅಮೃತ ಮತ್ತು ಗರುಡ’, ‘ಶಕ್ತಿ ಶಾರದೆಯ ಮೇಳ’, ಸಾಹಿತ್ಯ ಕಥನ, ಸಂಸ್ಕೃತಿ ಕಥನ, ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ, ಉರಿಚಮ್ಮಾಳಿಗೆ ಕೃತಿಗಳು ಕನ್ನಡಕ್ಕೆ ಹೊಸತನವನ್ನು ತಂದ ಕೃತಿಗಳು. ಈ ಕೃತಿಗಳಲ್ಲಿ ಬ್ರಿಟಿಷ್ ನಿರ್ವಸಾಹತೀಕರಣದ ಚಿಂತನೆಗಳು ಅಡಗಿದೆ. ದೇಸೀ ಚಿಂತನೆಗಳಲ್ಲಿ ಅಡಗಿದ್ದ ವಿಸ್ಮೃತಿಗಳನ್ನು ವಸಹಾತುಶಾಹಿ ಚಿಂತನೆಯ ಅಧ್ಯಯನದ ಮಾದರಿಗಳಿಂದ ಬಿಡುಗಡೆಗೊಳಿಸಿದ ಚಿಂತಕರ ಸಾಲಿನಲ್ಲಿ ನಾಗರಾಜ್ ಅವರಿಗೆ ಅಗ್ರಸ್ಥಾನವಿದೆ. ಅಲ್ಲದೇ ಇವರು ನವವಸಹಾತೋತ್ತರ ಜಾಗತಿಕ ಚಿಂತಕರ ಪಟ್ಟಿಯಲ್ಲೂ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಆಧುನಿಕೊತ್ತರವಾದ ಒಡ್ಡುವ ಸಂಕೀರ್ಣ ಸವಾಲುಗಳನ್ನು ಕನ್ನಡದಲ್ಲಿ ಚರ್ಚೆಗೆ ಸೂಕ್ಷ್ಮವಾಗಿ ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜನಪ್ರಿಯ ಸಾಹಿತ್ಯ, ಜನಪ್ರಿಯ ಕಲೆ-ಸಿನಿಮಾ ಪ್ರಕಾರಗಳನ್ನು ತಮ್ಮ ಗಂಭೀರವಾದ ಅಧ್ಯಯನದ ಕಕ್ಷೆಗೆ ಪರಿಗಣಿಸಿದ್ದು ಅವರ ವಿಶೇಷ ಪ್ರತಿಭೆಯ ಪರಿ. ನಾಗರಾಜ್ ಅವರ ಚಿಂತನೆಗಳು ಹಾಗೂ ಅವರ ವಿಮರ್ಶಾ ಕೃತಿಗಳನ್ನು ಕುರಿತು ನಾಡಿನ ವಿದ್ವಾಂಸರು, ಅವರ ಸ್ನೇಹಿತರು ವಿವಿಧ ದೃಷ್ಟಿಕೋನಗಳಿಂದ ನೋಡಿ ಬರೆದಿರುವ ವಿಮರ್ಶಾ ಬರಹಗಳು ಹಾಲಿ ಗ್ರಂಥದಲ್ಲಿ ಸಂಯೋಜನೆಗೊಂಡಿವೆ.

About the Author

ಶಿವರಾಜ ಬ್ಯಾಡರಹಳ್ಳಿ

ಲೇಖಕ ಶಿವರಾಜ ಬ್ಯಾಡರಹಳ್ಳಿ ಅವರು ಬೆಂಗಳೂರು ವಿ.ವಿ. ಯಿಂದ ಸ್ನಾತಕೋತ್ತರ ಪದವೀಧರರು. ‘ಉಜ್ಜನಿ ಚೌಡಮ್ಮ ಒಂದು ಜಾನಪದೀಯ ಅಧ್ಯಯನ’ ವಿಷಯವಾಗಿ ಬೆಂಗಳೂರು ವಿ.ವಿ.ಗೆ ಸಲ್ಲಿಸಿದ ಪಿಎಚ್.ಡಿ ಪ್ರಬಂಧ. ಸದ್ಯ ಬೆಂಗಳೂರಿನ ಆಕ್ಸ್ ಫರ್ಡ್ ಪದವಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.  ಕೃತಿಗಳು: ಗುಡಿಸಿಲೊಳಗೊಂದು ಬೆಳ್ಳಿ ಚುಕ್ಕಿ(ಕವನ ಸಂಕಲನ), ಉಜ್ಜನಿ ಚೌಡಮ್ಮ ಒಂದು ಜಾನಪದೀಯ ಅಧ್ಯಯನ(ಪ್ರೌಢ ಪ್ರಬಂಧ), ಪರಿಶೋಧ(ಸಾಹಿತ್ಯ ವಿಮರ್ಶೆ), ಜೇನು ಮನೆಕಲ್ಲು(ಮಕ್ಕಳ ಕಥೆಗಳು), ವಚನ ಪಲ್ಲವಿ(ಸಾಹಿತ್ಯ ವಿಮರ್ಶೆ), ಚಮ್ಮಾವುಗೆಯ ಕಿಡಿಗಳು(ಕವನ ಸಂಕಲನ), ಇಳಿಲ ಬೇರು (ಸಾಹಿತ್ಯ ವಿಮರ್ಶೆ), ಮಣ್ಣಿನ ಮಿಡಿತ (ಕಥಾಸಂಕಲನ) ಸಂಪಾದಿತ: ಕಥಾಮಂಟಪ (ಜನಪದ ಕಥೆಗಳು), ಪಚ್ಚೆ ಗಿಳಿ ಮತ್ತು ...

READ MORE

Reviews

ಡಾ.ಡಿ.ಆರ್. ನಾಗರಾಜ್ ಅವರ ‘ಅನನ್ಯ ಪ್ರತಿಭೆಯ ಪರಿ’

ಬೆಂಗಳೂರಿನ ಕಿರಂ ಪ್ರಕಾಶನ ಪ್ರಕಟಿಸಿರುವ 'ಅನನ್ಯ ಪ್ರತಿಭೆಯ ಪರಿ' ಪುಸ್ತಕವನ್ನು ಡಾ. ಶಿವರಾಜ ಬ್ಯಾಡರಹಳ್ಳಿ ಸಂಪಾದಿಸಿದ್ದಾರೆ. ಇದರಲ್ಲಿ ಒಟ್ಟು ಹತ್ತು ಭಾಗಗಳಿದ್ದು ಸುಮಾರು 70 ಬರಹಗಳು ಇವೆ. ಇವುಗಳಲ್ಲಿ 5 ಬರೆಹಗಳು ಇಂಗ್ಲಿಶಿನಲ್ಲಿ ಇವೆ. ಡಿ.ಆರ್.ನಾಗರಾಜರ ಒಟ್ಟು ಬರೆಹಗಳು ಬಗೆಗಿನ ಚಗಳ ಮೂಲಕ ಅವರ ಚಿಂತನೆ ಮತ್ತು ವ್ಯಕ್ತಿತ್ವವನ್ನು ಗ್ರಹಿಸಿಕೊಡುವ ಪ್ರಯತ್ನದ ಗುರಿಯಲ್ಲಿ ಈ ಪುಸ್ತಕವು ರೂಪುಗೊಂಡಿದೆ.

ಡಿ.ಆರ್. ನಾಗರಾಜರ ಮೊದಲ ಪ್ರಕಟಿತ ಪುಸ್ತಕ 'ಅಮೃತ ಮತ್ತು ಗರುಡ'ದ ಮೂಲಕ 'ಸಾಹಿತ್ಯದ ಸಾಂಸ್ಕೃತಿಕ ಮಹತ್ವ ಮತ್ತು ಜೀವಂತತೆಯನ್ನು ಕೇಂದ್ರವಾಗಿಟ್ಟುಕೊಂಡ ವೈಚಾರಿಕತೆ'ಯನ್ನು, ಆಧುನಿಕ ಕನ್ನಡ ಕಾವ್ಯವನ್ನು ಕುರಿತ ಅಧ್ಯಯನದ ಒಂದು ಮಾದರಿಯನ್ನು 'ಶಕ್ತಿ ಶಾರದೆಯ ಮೇಳ'ದ ಮೂಲಕ ಡಿ.ಆರ್‌. ಹೇಗೆ ಮಾಡಿದ್ದಾರೆ ಎನ್ನುವುದನ್ನು, 'ಅಲ್ಲಮಪ್ರಭು ಮತ್ತು ಶೈವಪ್ರತಿಭೆ'ಯನ್ನು ಸಾಂಸ್ಕೃತಿಕ ವಾಗ್ವಾದಗಳಿಗೆ ಹೊಸರೂಪಕವಾಗಿ ನೋಡುವ ಡಿ.ಆರ್‌. ಅವರ ಶೈವ ದಾರ್ಶನಿಕ ನಡೆಯ ರೋಚಕ ಪಯಣವನ್ನು ಅವರು ಅನುವಾದಿಸಿದ ಸೂಫಿ ಪದ್ಯಗಳ 'ವಸಂತಸ್ಕೃತಿಯ ಕುರಿತಾದ ಬರಹಗಳನ್ನು, 'ಸಾಹಿತ್ಯ ಕಥನ'ದ ಬಹುಮುಖಿ ಚಿಂತನೆಗಳನ್ನು, ಸಾಮಾಜಿಕ ಕೋಧ ಮತ್ತು ಆಧ್ಯಾತ್ಮಿಕ ಹುಡುಕಾಟದ ದಲಿತ ನೋಟದ 'ಪ್ಲೆಮಿಂಗ್ ಫೀಟ್' ಕುರಿತಾಗಿ ಮೊದಲ ಆರು ಭಾಗಗಳಲ್ಲಿ ಬರೆಹಗಳು ಹರಡಿಕೊಂಡಿವೆ. ಮುಂದಿನ ನಾಲ್ಕು ಭಾಗಗಳಲ್ಲಿ ಡಿ.ಆರ್.ಎನ್ ಅವರು ಮಂಡಿಸಿದ 'ಸಾಹಿತ್ಯ-ಸಂಸ್ಕೃತಿಯ ಬಹುತ್ವ'ದ ಬಗೆಗಿನ ಬರಹಗಳು ಹಾಗೂ ಅವರ ವ್ಯಕ್ತಿತ್ವ ಮತ್ತು ಚಿಂತನೆಗಳನ್ನು ಬೇರೆಬೇರೆ ನೆಲೆಗಳಲ್ಲಿ ನಡೆಗಳಲ್ಲಿ ನೋಡಿರುವ ವಿಮರ್ಶೆಗಳು ಮತ್ತು ಅವರ ಸ್ನೇಹಿತರು, ವಿದ್ಯಾರ್ಥಿಗಳ ಬರೆಹಗಳು ಇವೆ.

ಒಟ್ಟಿನಲ್ಲಿ: ಡಿ.ಆರ್‌.ನಾಗರಾಜ್ ಅವರ ಚಿಂತನೆಗಳನ್ನು ರಿ-ವಿಸಿಟ್ ಮಾಡಬಯಸುವವರಿಗೆ ಒಂದು ಸಮಗ್ರ ಗಹಿಕೆಯು ಸಿಗುವ ಹಾಗೆ ಈ ಮಸ್ತಕವನ್ನು ರೂಪಿಸುವ ಪ್ರಯತ್ನವನ್ನು  ಕನ್ನಡ ವಿದ್ವಾಂಸರು ವಿಮರ್ಶಕರ ಸಹಕಾರವನ್ನು ಪಡೆಯುವ ಮೂಲಕ ಸಂಪಾದಕರಾದ ಶಿವರಾಜು ಬ್ಯಾಡರಹಳ್ಳಿ ಮಾಡಿದ್ದಾರೆ. ಇವತ್ತಿಗೆ ಇದು ದೊಡ್ಡ ಕೆಲಸವೇ. ಡಿ.ಆರ್.ಎನ್. ಬರೆಹಗಳು ಸಂಗಮ ನೆಪದಲ್ಲಿ ಇಪತ್ತನೇ ಶತಮಾನದ ಗುರುತಿಸಲೇಬೇಕಾಗುವಂತಹ ವಿಮರ್ಶಕರ ಬರೆಹಗಳನ್ನು ನೋಡುವ ನೆಪದಲ್ಲಿ ಇಪ್ಪತ್ತನೇ ಶತಮಾನದ ಗುರುತಿಸಲೇಬೇಕಾಗುವಂತಹ ವಿಮರ್ಶಕರ ಬರೆಹದ ಜಾಡುಗಳೂ ಇಲ್ಲಿನ ಬರೆಹಗಳಲ್ಲಿ ಕಾಣಸಿಗುತ್ತವೆ.

ಹಿರಿಯರಾದ ರಂ.ಶ್ರೀ.ಮುಗಳಿ, ಜಿ.ಎಸ್.ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಜಿ.ಎಸ್.ಆಮೂರ, ಲಂಕೇಶ್, ಎಚ್.ಎಸ್.ರಾಘವೇಂದ್ರರಾವ್, ರಾಜೇಂದ್ರ ಬಿ ಐ ರಾಮಚಂದ್ರನ್, ಎಚ್.ಎಸ್.ಶಿವಪ್ರಕಾಶ್, ಚಂದ್ರಶೇಖರ ಕಂಬಾರ, ಪುರುಷೋತ್ತಮ ಬಿಳಿಮಲೆ ಜಿ. ರಾಜಶೇಖರ ಮೊದಲಾದ ಹಿರಿಯ ಚಿಂತಕರಿಂದ ಶುರುವಾಗಿ ನಂತರದ ಕಾ ಎಂ.ಎಸ್.ಆಶಾದೇವಿ, ಬಂಜಗೆರೆ ಜಯಪ್ರಕಾಶ್ ಮೊದಲಾಗಿ ಇವತ್ತಿನ ಹೊಸ ತಲೆಮ ಚಿಂತಕರವರೆಗೆ ಡಿ.ಆರ್.ಎನ್ ಅವರ ಚಿಂತನೆಗಳು ಒರೆಗೆ ಒಳಗಾಗಿರುವುದನ್ನು ಈ ಪುಸ್ತಕ ಒಳಗೊಂಡಿದೆ. ಆ ಮೂಲಕ ಡಿ.ಆರ್‌.ನಾಗರಾಜ್, ವಸಾಹತು, ಆಧುನಿಕತ, ದೇಯ ದಂಗೆಗಳಾಗಿ ವ ದರ್ಶನಗಳನ್ನು ವಿವರಿಸಿದ ಬಗೆ, ಸಾಂಸ್ಕೃತಿಕ ವಿಸ್ಕೃತಿಯನ್ನು ವ್ಯಾಖ್ಯಾನಿಸಿದ ಬಗೆ, ಇವೆಲ್ಲವುಗಳ ಮೂಲಕ ಸಾಹಿತ್ಯ, ಸಮಾಜ, ಭಾಷೆಗಳನ್ನು ನೋಡುವ ಗ್ರಹಿಸುವ ನಡೆಗಳನ್ನು ಇಲ್ಲಿನ ಕೂಡುವ ಮೂಲಕ ಕಟ್ಟಿಕೊಡಲಾಗಿದೆ ಎನ್ನುವುದೇ ಈ ಪುಸ್ತಕದ ಹೆಗ್ಗಳಿಕೆ ಕೂಡ. ಹಾಗೇ ಕಟ್ಟಿಕೊಡುವ ಮೂಲಕ ಡಿ.ಆರ್.ಎನ್. ಕನ್ನಡದ ಚಿಂತನೆಯ ನಡೆಯನ್ನು ಹೇಗೆ ಕಾಣಲು ಪ್ರಯತ್ನಿಸುತ್ತಿದ್ದರು. ಕಟ್ಟುತ್ತಿದ್ದರು, ಅದು ಇವತ್ತಿಗೆ ಹೇಗೆ ಉಪಯುಕ್ತ, ಹೇಗೆ ಮತ್ತು ಹೇಗಲ್ಲ ಅನ್ನುವಲ್ಲಿನವರೆಗೆ ಇಲ್ಲಿ ಚರ್‍ಚೆಗಳು ಇವೆ.

ಡಿ.ಆರ್.ನಾಗರಾಜ್‌ ಕಳೆದ ಶತಮಾನದ ಕೊನೆಕೊನೆಯ ದಶಕಗಳಲ್ಲಿ, ಉದಿಸಿದ ಅನನ್ಯ ಪ್ರತಿಭೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. 20ನೆಯ ಶತಮಾನದ ಮೊದಲ ಅರೆಕಾಲದಲ್ಲಿ ಕುವೆಂಪು ಕನ್ನಡ ಸಾಹಿತ್ಯ ಮತ್ತು ಚಿಂತನೆಯ ವಯ್ದಿಕ ಜಗತ್ತನ್ನು ಹೊಕ್ಕು ಬೆಳೆದಂತಹ ಸಾಹಸವನ್ನು ಮತ್ತೊಂದು ಬಗೆಯಲ್ಲಿ ಡಿ.ಆರ್‌.ನಾಗರಾಜರು ಮಾಡಲು ಹೊರಟಂತೆ-ಆದಕ್ಕೂ ಹೆಚ್ಚಿನದು ಏನನ್ನೋ ಮಾಡುತ್ತೇನೆಂದು ಹೊರಟಂತೆ ಅವರ ಚಿಂತನೆಗಳನ್ನು ಗಮನಿಸಿದ ಯಾರಿಗೂ ಅನಿಸುತ್ತದೆ. ಒಮ್ಮೆಗೇ ಯೂರೋಪಿಯನ್ ಚಿಂತನೆ, ಸಂಸ್ಕೃತ ಚಿಂತನೆ ಮತ್ತು ಸಮಕಾಲೀನಗಳನ್ನು ಎದುರಿಸಲು ಶಸ್ತ್ರಸಜ್ಜಿತನಾಗಿ ನಿಂತಂತೆ ಕಾಣುವ ಡಿ.ಆರ್.ಎನ್. ತಮ್ಮ ಅಂತಹ ಗುಣದಿಂದಾಗಿಯೇ ಅನೇಕ ಕನ್ನಡ ಮನಸ್ಸುಗಳಿಗೆ 'ಆಧುನಿಕೋತ್ತರ ತತ್ವಜ್ಞಾನಿ'ಯಂತೆ ಕಂಡವರು. ಅವರು ಸತ್ತ(1998) ನಂತರದ ಕಾಲದಲ್ಲಿ ಅವರ ಚಿಂತನೆಗಳನ್ನು ಒಟ್ಟಿಗೆ ನೋಡುವ ಒಂದು ಸಾಹಸವೇ ಈ ಮಸ್ತ ಅನನ್ಯ ಪ್ರತಿಭೆಯ ಪರಿ. 

( ಕೃಪೆ : ಪುಸ್ತಕಲೋಕ, ಬರಹ : ಆರ್. ಛಲಪತಿ)

Related Books