ಗಂಡು ಜನ್ಮವೇಕೆ?

Author : ಚೇತನ್ ಕುಮಾರ್ ನವಲೆ

Pages 72

₹ 99.00




Year of Publication: 2023
Published by: ನವಲೆ ಪ್ರಕಾಶನ
Address: ಬಸವೇಶ್ವರ ನಗರ, 10ನೇ ವಾರ್ಡ್, ಕೋರ್ಟ್ ರಸ್ತೆ ಹಿಂಭಾಗ ಹೂವಿನ ಹಡಗಲಿ- 583219
Phone: 9535452285

Synopsys

ಚೇತನ್ ಕುಮಾರ್ ನವಲೆ ಅವರು ಬರೆದ ‘ಗಂಡು ಜನ್ಮವೇಕೆ?’ ಎಂಬ ವೈವಿಧ್ಯಮಯ, ವಿಚಾರಪೂರ್ಣ ಲೇಖನಗಳ ಸಂಗ್ರಹದ ಈ ಪುಸ್ತಕ ಭೂಮಿಯ ಮೇಲಿರುವ ಗಂಡು ಜಾತಿಯನ್ನೇ ಚಿಂತನೆಗೆ ಹಚ್ಚುವ ಕೃತಿಯಾಗಿದೆ. ಮನು, ಚಾಣಕ್ಯರ ಕಾಲದಿಂದಲೂ ಹೆಣ್ಣನ್ನು ಗೌರವದಿಂದ ಕಾಣಿರಿ, ದೇವತೆಯಂತೇ ತಿಳಿಯಿರಿ, ಅಬಲೆ-ದುರ್ಬಲೆಯೆಂದೇ ಸಹಕರಿಸಿ, ಸಹನಾಮೂರ್ತಿಯೆಂದೇ ಸಹಿಸಿರಿ, ನಮ್ಮನ್ನು ಹೆತ್ತ ತಾಯಿ ಹೆಣ್ಣಲ್ಲವೇ? ಮಮತೆ ತೋರುವ ಸಹೋದರಿಯಲ್ಲವೇ? ಸಪ್ತಪದಿ ತುಳಿದು, ಹೆತ್ತವರನ್ನು ಬಂಧುಬಳಗವನ್ನು ತೊರೆದು, ಹುಟ್ಟಿದೂರನ್ನು ಮರೆತು, ನಮ್ಮೊಡನೆ ಹೆಜ್ಜೆ ಮೇಲೆ ಹೆಜ್ಜೆ ಹಾಕುವವಳಲ್ಲವೇ? ಎಂದು ಸಾಹಿತ್ಯಿಕ, ಕಾವ್ಯಮಯ, ಮಂತ್ರಮಯಗಳಲ್ಲಿ ವರ್ಣಿಸಿ, ಗಂಡು ಎಂದರೆ ಆಕೆಗೆ ರಕ್ಷಣೆ ಕೊಡಲೆಂದೇ, ಗೌರವದಿಂದ ಕಾಣಲೆಂದೇ, ಆಕೆಯ ನೆರಳಾಗಿ ಇರಲೆಂದೇ ಹುಟ್ಟಿದವನೆಂದು ಬಿಂಬಿಸುತ್ತಾ ಬರೆದು, ಒತ್ತಿ ಒತ್ತಿ ಹೇಳಿ ಅವನನ್ನು ಮೂಕನನ್ನಾಗಿ ಮಾಡಿದ್ದ ಶತಮಾನಗಳ ಕಲ್ಪನೆಗಳನ್ನು ತುಂಡರಿಸಿ, ಸತ್ಯ ಘಟನೆಗಳ ಉದಾಹರಣೆಗಳೊಂದಿಗೆ ಗಂಡಸಿನ ದಯನೀಯ ದಿನಚರಿಯನ್ನು, ಜೀವನವನ್ನು ಯಥಾವತ್ತಾಗಿ ತೆರೆದಿಟ್ಟ ಲೇಖನಗಳ ಈ ಪುಸ್ತಕವನ್ನು ಓದುತ್ತಾ ಹೋದಂತೆ, ನಮ್ಮ ನಡೆಯನ್ನು ನಾವೇ ಸ್ವತಃ ಪ್ರಶ್ನಿಸಿಕೊಳ್ಳುವಂತೆ ಮಾಡುವ ಈ ಕೃತಿ, ಪ್ರತೀ ಲೇಖನವನ್ನೂ ಓದಿಸಿಕೊಂಡು ಹೋಗುವ ಗುಣವನ್ನು ಪಡೆದಿರುವುದರಲ್ಲಿ ಹಾಗೂ ಸಂದೇಶವನ್ನು ರವಾನಿಸುವಲ್ಲಿ ಯಶಸ್ವಿಯಾಗಿದೆ.

About the Author

ಚೇತನ್ ಕುಮಾರ್ ನವಲೆ

ಚೇತನ್ ಕುಮಾರ್ ನವಲೆ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಒಬ್ಬ ಕನ್ನಡ ಬರಹಗಾರ. ಹುಟ್ಟೂರು ಹೂವಿನ ಹಡಗಲಿ. ವಾಸ ಬೆಂಗಳೂರು. ಜೀವಚೇತನ, ಸಮಾನಾಂತರ ಬ್ರಹ್ಮಾಂಡದಲ್ಲಿ, ಭವ್ಯಚೇತನ, ದಿವ್ಯಚೇತನ, ಗಂಡುಜನ್ಮವೇಕೆ? ಇವರ ಕೃತಿಗಳು. ಜೀವಚೇತನ ಕವನಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಪ್ರಶಸ್ತಿಗಳು: ಕನ್ನಡರತ್ನ ಪ್ರಶಸ್ತಿ ...

READ MORE

Related Books