ನವರಸಗಳಲ್ಲಿ ಶೃಂಗಾರ ರಸವು ಪ್ರಮುಖ. ಸಾಹಿತ್ಯದ ಯಾವುದೇ ಪ್ರಕಾಋದಲ್ಲಿ ಶೃಂಗಾರ ರಸವೇ ಹೆಚ್ಚಾಗಿ ಕಾಣಿಸಿಕೊಂಡು ಓದುಗರನ್ನು, ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಯಾವ ರಸವನ್ನು ಕಾವ್ಯ ಇಲ್ಲವೇ ಕೃತಿಯಲ್ಲಿ ಪ್ರಧಾನವಾಗಿಸಬೇಕು ಎಂಬುದನ್ನು ಅರಿತವ ಮಾತ್ರ ಕವಿಯಾಗಲು ಸಾಧ್ಯ. ಈ ರಸಗಳ ಔಚಿತ್ಯವನ್ನು ಕವಿ ತಿಳಿದಿದ್ದರೆ ಕಾವ್ಯವು ರಸಭರಿತವಾಗಿರುತ್ತದೆ. ಇಲ್ಲಿದಿದ್ದರೆ ಕಾವ್ಯವು ಗುಣ -ಲಕ್ಷಣ ದೋಷದಿಂದ ಬಳಲುತ್ತದೆ. ರತಿ ಸ್ಥಾಯಿ ಭಾವವು ತಾಯಿಯಲ್ಲಿ ವಾತ್ಸಲ್ಯವಾಗಿ, ತರುಣ-ತರುಣಿಯರಲ್ಲಿ ಪ್ರೇಮವಾಗಿ, ಗೆಳೆಯರಲ್ಲಿ ಸ್ನೇಹವಾಗಿ, ದೇವರಲ್ಲಿ ಭಕ್ತಿಯಾಗಿ ಮಾರ್ಪಾಟುಗೊಳ್ಳುತ್ತಲೇ ಇರುತ್ತದೆ. ಈ ಪ್ರಕ್ರಿಯೆಯಲ್ಲಿ ಕವಿ ಅರ್ಥೈಸಿಕೊಳ್ಳಬೇಕು. ನವರಸಗಳನ್ನು ಅರ್ಥ ಮಾಡಿಕೊಳ್ಳುವುದೆಂದರೆ ಕವಿಯು ಬಹುತೇಖ ವೇಳೆ ಪರಕಾಯ ಪ್ರವೇಶ ಮಾಡಲೇಬೇಕು. ಆಗಲೇ ಪಾತ್ರಗಳ ನೈಜ ಮನೋಭಾವವು ಬಯಲಿಗೆಳೆಯಲು ಸಾಧ್ಯ.
ಈ ಹಿನ್ನೆಲೆಯಲ್ಲಿ, ಕವಿ ಡಾ. ಕೆ. ಕೃಷ್ಣಮೂರ್ತಿ ಅವರು ಕಾವ್ಯ, ಗದ್ಯ ಸೇರಿದಂತೆ ಯಾವುದೇ ಪ್ರಕಾರವಿರಲಿ, ಅಲ್ಲಿಯ ಪಾತ್ರಗಳಲ್ಲಿ ಪರಕಾಯ ಮಾಡುವ ಮೂಲಕ ಆಸಾಹಿತ್ಯ ಪ್ರಕಾರದ ನೈಜ ರಸವನ್ನು ಒಧುಗರಿಗೆ ನೀಡಿದ್ದು, ಅದರ ಭಾಗವಾಗಿ ಈ ಕೃತಿ ‘ಸಂಸ್ಕೃತ ಸಾಹಿತ್ಯದಲ್ಲಿ ಶೃಂಗಾರ ರಸ’ ಪ್ರಕಟಗೊಂಡಿದೆ. ವೇದ, ಪುರಾಣ, ಇತಿಹಾಸ, ಮಹಾಕಾವ್ಯ ಹೀಗೆ ವಿವಿಧ ಸಾಹಿತ್ಯದಲ್ಲಿ ಉಕ್ಕಿ ಹರಿದ ಇಲ್ಲವೇ ಪ್ರವಹಿಸಿದ ಶೃಂಗಾರ ರಸದ ದರ್ಶನದೊಂದಿಗೆ ಈ ಕೃತಿಯು ಶೃಂಗಾರ ರಸದ ಅಗಾಧ ಅನುಭವ ನೀಡುತ್ತದೆ.
ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...
READ MORE