ಆಂಗ್ಲ ಸಾಹಿತ್ಯವು ವಿಶ್ವದೆಲ್ಲೆಡೆ ಹರಡಿದೆ. ಪಾಶ್ಚಿಮಾತ್ಯ ಸಾಹಿತ್ಯವು ಅನುವಾದದಗಳ ಮೂಲಕ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದೆ. ಹೀಗಾಗಿ, ಆ ಸಾಹಿತ್ಯದ ಸಂಸ್ಕೃತಿಯ ಸಾಮಾಜಿಕ ವಿದ್ಯಮಾನಗಳ ಪರಿಚಯ ಆಗಿದೆ. ನೋಡುವ ದೃಷ್ಟಿಕೋನವೂ ಬದಲಾಗಿದೆ. ಈ ಹಿನ್ನೆಲೆಯಲ್ಲಿ, ಪಾಶ್ಚಿಮಾತ್ಯ ಸಾಹಿತ್ಯ ಲೋಕ ಕೃತಿಯು ಹತ್ತು ಹಲವು ಒಳನೋಟಗಳನ್ನು ನೀಡುತ್ತದೆ. ವಿವಿಧ ಪಾಶ್ಚಿಮಾತ್ಯ ಸಾಹಿತಿ-ಚಿಂತಕರ ಲೇಖನಗಳನ್ನು ಲೇಖಕಿ ನಾಗರೇಖಾ ಗಾಂವಕರ್ ಅವರು ವಿಮರ್ಶೆಗೆ ಎತ್ತಿಕೊಂಡಿದ್ದಾರೆ. ಅಲ್ಬರ್ಟ್ ಕಾಮೂ, ನಿಕೋಲೆ ಗೂಗಲ್, ಅಲ್ಬರ್ಟ್ ಐನ್ ಸ್ಟೀನ್, ಸೋಫೋಕ್ಲಿಸ್, ಯೂರಿಪಿಡಿಸ್, ರಾಬರ್ಟ್ ಫ್ರಾಸ್ಟ್, ಟಾಲ್ ಸ್ಟಾಯ್ ಹೀಗೆ ಪ್ರಸಿದ್ಧ 51 ಜನ ಲೇಖಕರ ಬರೆಹಗಳನ್ನು ವಿಮರ್ಶೆ ಮಾಡಿದ್ದು, ದೇಶ-ಕಾಲ ಮೀರಿಯೂ ಮಾನವೀಯ ಸಂವೇದನೆಯೂ ಸಾಹಿತ್ಯದಲ್ಲಿ ಕೆಲಸ ಮಾಡಿದೆ ಎಂಬುದನ್ನು ಕಂಡುಕೊಂಡಿದ್ದಾರೆ.
ಸೂಕ್ಷ್ಮ ಸಂವೇದನೆಯ ಕತೆಗಾರ್ತಿ ನಾಗರೇಖಾ ಗಾಂವಕರ ಅವರು ಮೂಲತಃ ಉತ್ತರ ಕನ್ನಡದವರು. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿಧರೆಯಾದ ಅವರು ಪ್ರಸ್ತುತ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ’ (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ (ಅಂಕಣ ಬರಹ ಕೃತಿ), ಸಮಾನತೆಯ ಸಂಧಿಕಾಲದಲ್ಲಿ (ಮಹಿಳಾ ಸಮಾನತೆಯ ಕುರಿತ ಅಂಕಣ ಬರಹ ಕೃತಿ), ಕವಾಟ (ಪುಸ್ತಕ ಪರಿಚಯ ಕೃತಿ) ಅವರ ಪ್ರಮುಖ ಕೃತಿಗಳು. ಅವರ ‘ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ...
READ MORE