ಡಾ.ವಿಜಯಾ ಸುಬ್ಬರಾಜ್ ಅವರ ಕೃತಿ 'ಪು.ತಿ.ನ. ಗೀತನಾಟಕಗಳು ತಾತ್ವಿಕ ಚಿಂತನೆಗಳು' ಪು.ತಿ.ನ. ಅವರ ಗೀತನಾಟಕಗಳು ಎನ್ನುವಾಗ ಸಾಮಾನ್ಯವಾಗಿ ಅವರು ಅಹಲ್ಯೆ, ಗೋಕುಲ ನಿರ್ಗಮನ ಇಂತಹ ಒಂದೆರಡು ಕೃತಿಗಳನ್ನು ಗಮನಿಸಿ ಚರ್ಚಿಸುವುದು ರೂಢಿ. ಆದರೆ, ಪು.ತಿ.ನ ಅವರು 23 ಗೀತನಾಟಕಗಳನ್ನು ರಚಿಸಿದ್ದಾರೆ. ಸಮಗ್ರ ಗೇಯ ಕಾವ್ಯ ನಾಟಕಗಳು ಎಂಬ ಹೆಸರಿನಲ್ಲಿ ಅವರ ಎಲ್ಲ ಗೀತನಾಟಕಗಳನ್ನು ಪು.ತಿ.ನ ಟ್ರಸ್ಟ್ ಪ್ರಕಟಿಸಿದೆ. ಈಗ ಡಾ. ವಿಜಯಾ ಅವರು ಪು.ತಿ.ನ ಅವರ ಎಲ್ಲ ಗೀತ ನಾಟಕಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಈ ಕೃತಿ ಪ್ರಕಟಿಸಿದ್ದಾರೆ. ಸಹಜವಾಗಿಯೇ ಈವರೆಗೆ ಚರ್ಚೆಗೆ ಬಾರದ ಅನೇಕ ಅಂಶಗಳು ಈ ಕೃತಿಯಲ್ಲಿ ಪ್ರಸ್ತಾಪಿತವಾಗಿವೆ.
ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...
READ MORE