ಪ್ರಜ್ಞೆ ಮತ್ತು ಪರಿಸರ

Author : ಯು.ಆರ್. ಅನಂತಮೂರ್ತಿ

Pages 220

₹ 150.00




Year of Publication: 2014
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್, ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560 0046
Phone: 26617100, 26617755

Synopsys

ಅನಂತಮೂರ್ತಿ ಅವರ ಈ ವಿಮರ್ಶಾ ಸಂಕಲನದಲ್ಲಿ 18 ಲೇಖನಗಳಿವೆ. ಪ್ರಜ್ಞೆ ಮತ್ತು ಪರಿಸರ ಮೊದಲ ಲೇಖನ. ಸಾರ್ತ್ರ ಮತ್ತು ಅಸ್ತಿತ್ವವಾದ, ಮಾರ್ಕ್ಸ್‌‌ವಾದ ಮತ್ತು ಸಾಹಿತ್ಯದಲ್ಲಿ ನಿಷ್ಠೆಯ ಪ್ರಜ್ಞೆ, ಸಾಹಿತ್ಯದಲ್ಲಿ ವೈಚಾರಿಕತೆ, ಕನ್ನಡ ಕಾದಂಬರಿಯ ಭವಿಷ್ಯ, ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ, ಭಾಷಾ ಸಮಸ್ಯೆ ಕೆಲವು ಟಿಪ್ಪಣಿಗಳು, ಹದಿನೈದು ವರ್ಷಗಳ ನವ್ಯ ಗದ್ಯ ಸಾಹಿತ್ಯ, ಬದಲಾಗುತ್ತಿರುವ ಕನ್ನಡ ಕಾವ್ಯ ಮಾರ್ಗ, ಅಡಿಗರ ಭೂಮಿಗೀತ, ಚೆನ್ನಯ್ಯ ಅವರ ಆಮೆ, ಚಿತ್ತಾಲರ ಕವನಗಳು, ಬೆಕೆಟ್, ರಾಮಮನೋಹರ ಲೋಹಿಯಾ ಮುಂತಾ ಲೇಖನಗಳಿವೆ.

ಈ ಸಂಕಲನದ ಮೊದಲ ಮುದ್ರಣದ ಬೆನ್ನುಡಿಯಲ್ಲಿ ’ಸಾಹಿತ್ಯ ಪರಂಪರೆಯೊಂದನ್ನು ಹಿನ್ನೆಲೆಗಿಟ್ಟುಕೊಂಡು ಅದಕ್ಕೆ ತಮ್ಮ ವಿಶಿಷ್ಟ ಕೃತಿಗಳಿಂದ ಹೊಸ ಗೆರೆಗಳನ್ನು ಹಚ್ಚುತ್ತಿರುವ ಯು. ಆರ್. ಅನಂತಮೂರ್ತಿ ವಿಚಾರವಂತ ಕನ್ನಡಿಗರಿಗೆಲ್ಲ ತೀರ  ಪರಿಚಿತವಾದ ಹೆಸರು. ಕ್ರಾಂತಿಗಂಧಿಯಾದ ಇವರ ಬರಹ ಕನ್ನಡದ ಸಣ್ಣಕಥೆಯ ಪ್ರಕಾರವನ್ನು ಅದರ ಮಾಮೂಲು ಜಾಡಿನಿಂದ ಹೊರಗೆಳೆದು ಹೊಸ ಬಯಲಲ್ಲಿ ಹರಿಯಬಿಟ್ಟರೆ, ಅನನ್ಯ ಅನುಭವ ಚಿಂತನೆಗಳು ಕಲೆತ ಇವರ 'ಸಂಸ್ಕಾರ' ಕಾದಂಬರಿಯ ಬಗೆಗೆ ದೇಶದ ತುಂಬ ಗಂಭೀರ ಪ್ರತಿಕ್ರಿಯೆ ಬೆಳೆದಿದೆ. ಅರ್ಥ ಸತ್ತ ರೂಢಿಗಳಿಗೆ ಬಿದ್ದ ಬದುಕನ್ನು ಎಚ್ಚರಿಸುತ್ತ ಬರೆಯುತ್ತಿರುವ ಅನಂತಮೂರ್ತಿ, ಅಗ್ರಪಂಕ್ತಿಯ ಸೃಷ್ಟಿಶೀಲ ಲೇಖಕರಾಗಿರುವರಂತೆ, ಶ್ರೇಷ್ಠ ವಿಮರ್ಶಕರೂ ಆಗಿದ್ದಾರೆ. ಇಂದು ಕನ್ನಡದಲ್ಲಿ ಜಾಹೀರಾತು ಜಾತಿಯ ಕೂಗುಮಾರಿ ಕೃತಿಗಳೆಷ್ಟೋ ಹೊಸ ಬರಹದ ಸೋಗು ತೊಟ್ಟು ಬೀದಿ ಹಾಯುತ್ತಿವೆ. ಕೇವಲ ಮೇಲು ಹೊಳಪಿನ ಇಂಥ ಬಲೂನು ಬರಹಗಳನ್ನು ಕಾಳು ಕೃತಿಗಳಿಂದ ಪ್ರತ್ಯೇಕಿಸಬಲ್ಲ ಪ್ರಬುದ್ಧ ವಿಮರ್ಶೆ ಈಗ ತೀರ ಅಗತ್ಯವಾಗಿದೆ. ಅದಕ್ಕೆ ಬೇಕಾದ ಪ್ರೌಢ ವ್ಯಾಸಂಗ, ಆಳ ಚಿಂತನೆ, ಪೂರ್ವಗ್ರಹಮುಕ್ತ ವಿಮರ್ಶಾದೃಷ್ಟಿ ಇರುವ ತೀರ ಅಪರೂಪ ಲೇಖಕ ಅನಂತಮೂರ್ತಿ, ಈ ಮಾತಿಗೆ ಈ ಸಂಕಲನದ ಲೇಖನಗಳೇ ಸಾಕ್ಷ್ಯ ಹೇಳುತ್ತವೆ. ಕಳೆದೆರೆಡು ದಶಕಗಳಲ್ಲಿ ಕನ್ನಡದಲ್ಲಿ ಹೊರಬಂಧ ಪ್ರೌಢ ವಿಮರ್ಶೆಯ ಗಣನೀಯ ಭಾಗ ಈ ಸಂಕಲನದಲ್ಲಿ ಒತ್ತಟ್ಟಿಗೆ ಕಾಣಸಿಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

 

About the Author

ಯು.ಆರ್. ಅನಂತಮೂರ್ತಿ
(21 December 1932 - 22 August 2014)

ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...

READ MORE

Related Books