'ಮಂಗಳಕರ ಚಿಂತನೆ'ಯಲ್ಲಿ ಪ್ರೊ.ಕಾಳೇಗೌಡ ನಾಗವಾರ ಅವರು ಸಾಹಿತ್ಯದ ಮಗ್ಗಲುಗಳು ಕುರಿತು ನಡೆಸಿದ ಚಿಂತನೆಯಾಗಿದೆ. ಅವರ ಸಮಕಾಲೀನ ಬದುಕಿನ ಸಂವಾದದ ಜೀವಪರ ಚಿಂತನೆ, ಬಂಡಾಯ, ಹೋರಾಟದ ಬದುಕಿನ ಲೇಖನಗಳಿವೆ. ಇಲ್ಲಿ ಅವರ ವೈಚಾರಿಕ ಲೇಖನ, ಸಾಹಿತ್ಯ ವಿಮರ್ಶೆ, ಅವರೊಂದಿಗೆ ಹಲವರು ನಡೆಸಿದ ಸಂದರ್ಶನಗಳು, ಹೋರಾಟಗಾರರ ವ್ಯಕ್ತಿಗತ ಲೇಖನ, ಜಾನಪದ ಪರಂಪರೆಯ ವೈಚಾರಿಕ ಲೇಖನ, ಸಾಹಿತಿಗಳೊಂದಿಗೆ ನಡೆಸಿದ ಪತ್ರ ವ್ಯವಹಾರ ಮತ್ತು ಅವರ ಬದುಕಿನ ಹೆಜ್ಜೆಗಳು ಹೀಗೆಯೇ ಹಲವು ಹತ್ತು ಬಗೆಯ ವಿಚಾರದ ವಿಮರ್ಶಾ ಲೇಖನಗಳ ದರ್ಶನ ಸಿಗುತ್ತದೆ.
ಕತೆಗಾರ ಕಾಳೇಗೌಡ ನಾಗವಾರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನಾಗವಾರದವರು. ತಂದೆ ಸಿದ್ದೇಗೌಡ, ತಾಯಿ ಲಿಂಗಮ್ಮ. ನಾಗವಾರ, ಚೆನ್ನಪಟ್ಟಣ, ಮಂಡ್ಯ, ಮೈಸೂರಿನಲ್ಲಿ ಶಿಕ್ಷಣ ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದ ಎಂ.ಎ.(1971) ಪದವೀಧರರು. ಬೆಂಗಳೂರು ವಿ.ವಿ.ಯಿಂದ ‘ಕಾಡುಗೊಲ್ಲರ ಒಂದು ಹಟ್ಟಿಯ ಅಧ್ಯಯನ’ ಪ್ರಬಂಧಕ್ಕೆ ಪಿಎಚ್ ಡಿ ಪದವಿ (1985) ಪಡದರು. ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದರು. ಬೆಂಗಳೂರು ವಿ.ವಿ. ಜ್ಞಾನಭಾರತಿ ಕನ್ನಡ (1985) ಅಧ್ಯಯನ ಕೇಂದ್ರ ಹಾಗೂ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ (2007ರವರೆಗೆ) ಪ್ರಾಧ್ಯಾಪಕರಾಗಿದ್ದರು. ಕಾಳೇಗೌಡ ನಾಗವಾರ ಅವರ ...
READ MORE