ಲೇಖಕ ಕೃಷ್ಣ ಕಟ್ಟಿ ಅವರ ಕೃತಿ ನಾದದ ನವನೀತ. ಈ ಪುಸ್ತಕದಲ್ಲಿ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರ ದ. ರಾ. ಬೇಂದ್ರೆ ಅವರ ಕಾವ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಲಾಗಿದೆ. ಸಾಹಿತ್ಯ ರಚನೆಗೆ ಮೊದಲ ಒಲವುನೀಡುತ್ತಿದ್ದ ಇವರು ರಚಿಸಿದ ಕಾವ್ಯಗಳು, ಅವರ ಬರವಣಿಗೆ ಶೈಲಿ, ಅವುಗಳಿಂದ ಹೊರಬರುವ ಭಾವ, ಅರ್ಥಗಳು ಓದುಗನನ್ನ ರೋಮಾಂಚನಪಡಿಸಬಲ್ಲವುಗಳು. ಅಂಥ ಬೇಂದ್ರೆ ಕಾವ್ಯವನ್ನು ಕುರಿತ ಹಲವು ಒಳನೋಟಗಳು ಇಲ್ಲಿ ಸಿಗುತ್ತವೆ.
ಮೂಲತಃ ಧಾರವಾಡದವರಾದ ಕೃಷ್ಣ ಕಟ್ಟಿ ಅವರು ಸದ್ಯ ಹೊಸಪೇಟೆಯ ನಿವಾಸಿಯಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೇದಗಳಲ್ಲಿ ನಂಬಿಕೆ ಇರುವ ಹಿಂದೂ ಆಗಿರುವ ಕೃಷ್ಣ ಅವರು ಬೇಂದ್ರೆಯವರ ಕಾವ್ಯದ ಬಗ್ಗೆ ಅಧ್ಯಯನ ನಡೆಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ...
READ MORE