ಕವಿ ಕುವೆಂಪು ಅವರ ವಿಮರ್ಶಾ ಬರಹಗಳ ಸಂಕಲನ ’ವಿಭೂತಿ ಪೂಜೆ’. ಈ ಸಂಕಲನದಲ್ಲಿ 16 ಲೇಖನಗಳಿವೆ. ಕವಿಯಲ್ಲಿ ವಿಭೂತಿ, ಶಕ್ತಿ ಕವಿ ರನ್ನ, ಕಲಿಯದವರಿಗೂ ಕಾಮಧೇನು, ಇಂದಿನ ಹೊಸಗನ್ನಡ ಕವಿತೆ ಮತ್ತು ಅದರ ಮುಂದಿನ ನಡೆ, ಕವಿಯ ದೃಷ್ಟಿಯಲ್ಲಿ ಪ್ರಕೃತಿ, ಮಲೆನಾಡಿನ ನಿಸರ್ಗ ವಿಭೂತಿ, ವಚನಕಾರ ಬಸವೇಶ್ವರರು, ಲೌಕಿಕ ಭಾರತಕ್ಕೆ ಸ್ವಾಮಿ ವಿವೇಕಾನಂದರ ಜೀವನ ಸಂದೇಶ, ಪರಮಹಂಸರ ವಚನಾಮೃತದಲ್ಲಿ ದೃಷ್ಟಾಂತ ಕಥಾವಿಧಾನ, ದಿವಂಗತ ರಾಷ್ಟ್ರಪಿತ ಬಾಪೂಜಿಗೆ ಬಾಷ್ಪಾಂಜಲಿ, ಪೂರ್ಣದೃಷ್ಟಿಗೆ ಗಾಂಧೀಜಿ, ಕವಿ ರವೀಂದ್ರರು, ಶ್ರೀ ಅರವಿಂದರು, ಪ್ರಖ್ಯಾತ ಪೌರಾಣಿಕ ಯುದ್ಧಗಳು, ಶ್ರೀ ರಾಮಾಯಣ ದಿವ್ಯ ಶಿಲ್ಪಿ ಎಂಬ ವಿಮರ್ಶೆಯ ಲೇಖನಗಳಿವೆ. ಇದು 1953ರಲ್ಲಿ ಮೊದಲಿಗೆ ಪ್ರಕಟವಾಗಿತ್ತು.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE