ಕನಕದರ್ಶನ

Author : ದೇಜಗೌ (ದೇ. ಜವರೇಗೌಡ)

Pages 144

₹ 50.00




Year of Publication: 2003
Published by: ತನು ಮನು ಪ್ರಕಾಶನ
Address: ತನು ಮನು ಪ್ರಕಾಶನ, 42, ಜಿ ಬ್ಲಾಕ್, 3ನೇ ಕ್ರಾಸ್ ರಾಮಕೃಷ್ಣ ನಗರ, ಮೈಸೂರು-22
Phone: 2560001

Synopsys

ಸಾಹಿತಿ ದೇ.ಜವರೇ ಗೌಡರು (ದೇಜಗೌ)  ಕನಕದಾಸರು ಮತ್ತು ದಾಸಸಾಹಿತ್ಯದ ಕುರಿತು ಬರೆದಿರುವ  ಲೇಖನಗಳ ಸಂಗ್ರಹವೇ ’ ಕನಕದರ್ಶನ’ ಕೃತಿ.

ಕನಕದಾಸರ ವಿವಿಧ ಮುಖಗಳನ್ನು ಕುರಿತಾದ ಈ ಲೇಖನಗಳಲ್ಲಿ ಕೆಲವು ಸಂಗತಿಗಳು ಪೂರ್ಣಿಕೆಯಾಗಿ ಪುನರುಕ್ತಿಯಾಗಿವೆ ಎನಿಸಿದರೂ, ಒಂದೊಂದು ಲೇಖನವೂ ಪ್ರತ್ಯೇಕ ಘಟಕವಾಗಿಯೇ  ದಾಸರ ಜೀವನದ ಹಾಗೂ ಸಾಹಿತ್ಯದ ಧಾತುಸ್ವರೂಪದ ಸಂಗತಿಗಳ ಪುನರಾವರ್ತನೆಗೆ ದಾರಿಯಾಗುತ್ತವೆ.

About the Author

ದೇಜಗೌ (ದೇ. ಜವರೇಗೌಡ)
(06 July 1918 - 30 April 2016)

ದೇಜಗೌ ಎಂದು ಚಿರಪರಿಚಿತರಾಗಿದ್ದ ದೇವೇಗೌಡ ಜವರೇಗೌಡ ಕೃಷಿಕ ಕುಟುಂಬದಿಂದ ಬಂದವರು. ಚನ್ನಪಟ್ಟಣ ತಾಲ್ಲೂಕಿನ ಮೂಡಿಗೆರೆಯಲ್ಲಿ 1918ರ ಜುಲೈ 6ರಂದು ಜನಿಸಿದರು. ತಂದೆ ದೇವೇಗೌಡ- ತಾಯಿ ಚೆನ್ನಮ್ಮ. ಚಕ್ಕೆರೆ, ಚನ್ನಪಟ್ಟಣಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ ಬಿ.ಎ ಪದವಿ ಗಳಿಸಿ ಕೆಲವು ಕಾಲ ಗುಮಾಸ್ತರಾಗಿ ಕೆಲಸ ಮಾಡಿ ಅನಂತರ ಮೈಸೂರಿಗೆ ಹೋಗಿ ಎಂ.ಎ. ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ (1944) ಕೆಲಸಕ್ಕೆ ಸೇರಿದ ಅವರು ಅನಂತರ ಉಪಪ್ರಾಧ್ಯಾಪಕ, ಪರೀಕ್ಷಾಧಿಕಾರಿ, ಪ್ರಾಂಶುಪಾಲರು, ಇಲಾಖಾಮುಖ್ಯರು, ನಿರ್ದೇಶಕರು, ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿಯಾಗಿ ನಿವೃತ್ತರಾದರು. ಕುವೆಂಪು ವಿದ್ಯಾವರ್ಧಕ ...

READ MORE

Related Books