‘ಸಂಗಡ’ ಕೃತಿಯು ಮೂವತ್ತೆಂಟು ಮುನ್ನುಡಿ ಮತ್ತು ಪ್ರಸ್ತಾವನೆಗಳ ಸಂಗ್ರಹವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಸಾಹಿತ್ಯ ಚರಿತ್ರೆಯ ಕೃತಕ ನಿರ್ಮಾಣಗಳಿಗಿಂತ ಭಿನ್ನವಾಗಿ ವಾಸ್ತವದ ಸಾಂಸ್ಕೃತಿಕ ಲೋಕದ ಸ್ವರೂಪ ಹೇಗಿದ್ದೀತೆಂಬ ಕುತೂಹಲದ ಹುಡುಕಾಟ `ಇಪ್ಪತ್ತನೆಯ ಶತಮಾನದ ಕಾವ್ಯ’ದ ಪ್ರಸ್ತಾವನೆಯಲ್ಲಿದೆ. ಭಾಷೆಯನ್ನು ಅವರು `ನಿತ್ಯಮದುವಣಗಿತ್ತಿ’ ಎಂದು ವರ್ಣಿಸುತ್ತಾರೆ .ಆಧುನಿಕಗೊಳ್ಳುವಾಗಲೂ ಸಾತತ್ಯವನ್ನು ಕಾಪಾಡಿಕೊಳ್ಳುವ ಯತ್ನದಲ್ಲಿ ಅಥವಾ ಸಾತತ್ಯ ಉಳಿಸಿಕೊಳ್ಳುತ್ತಲೇ ಆಧುನಿಕಗೊಳ್ಳುವ ತಹತಹದಲ್ಲಿ ಗಳಿಸಿದ್ದೆಷ್ಟು, ಕಳೆದದ್ದೆಷ್ಟು? ಅಕ್ಷರಲೋಕದ ಅಂಚಿನ ಸುಪ್ತ ಜಾನಪದದ ಲೋಕದರ್ಶನದಲ್ಲಿ ಒಟ್ಟು ಸಮುದಾಯದ ಅನುಭವದ ಎದೆಬಡಿತ ಕೇಳಬಹುದೆಂಬ ನಿರೀಕ್ಷೆ ಅವರದು. ಸಾಹಿತ್ಯ ಚರಿತ್ರೆಯ ರಚಿತ ಆಕೃತಿಗಿಂತ ಬೇರೆಯೇ ಆಗಿರಬಹುದಾದ ನಿಜ ಜೀವನದರ್ಶನವನ್ನು ಅನುಸಂಧಾನಗೈವ ಅಪೇಕ್ಷೆ ಇಲ್ಲಿಯ ಬರಹಗಳ ಹಿಂದಿದೆ.
©2024 Book Brahma Private Limited.