ಕಾರಂತರ ಕಾದಂಬರಿಗಳಲ್ಲಿ ದಾಖಲಾಗಿರುವ ಗಂಡುಹೆಣ್ಣಿನ ಸಂಬಂಧದ ಪ್ರಶ್ನೆ ಹಾಗೂ ಆಧುನೀಕರಣದ ಪ್ರಕ್ರಿಯೆಗಳನ್ನು ವಿಮರ್ಶಕ ಟಿ.ಪಿ. ಅಶೋಕ ಅವರ ಈ ಪುಸ್ತಕ ಚರ್ಚಿಸುತ್ತದೆ. ಈ ಎರಡೂ ಪ್ರಶ್ನೆಗಳು ಕಾರಂತರ ಕೃತಿಗಳ ಎರಡು ಪೂರಕ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಗಂಡುಹೆಣ್ಣಿನ ಸಂಬಂಧದ ಆಂತರಿಕ ಜಗತ್ತು ಹಾಗೂ ವಸಾಹತುಶಾಹಿ ಇತಿಹಾಸವನ್ನು ಹಿನ್ನೆಲೆಯಾಗಿಟ್ಟುಕೊಂಡ ವಿಶಾಲ ಹೊರಜಗತ್ತುಗಳನ್ನು ಕಾರಂತರು ಹೇಗೆ ಮುಖಾಮುಖಿಯಾಗುತ್ತಾರೆ ಎಂಬುದನ್ನು ಲೇಖಕರು ವಿಶ್ಲೇಷಿಸಿದ್ದಾರೆ. ಹಾಗೆ ನೋಡಿದರೆ ಇವೆರಡೂ ಪರಸ್ಪರ ಪ್ರತಿಬಿಂಬಿಸುವ ಕನ್ನಡಿಗಳೂ ಹೌದು. ‘ವೈಯಕ್ತಿಕ’ ಮತ್ತು ‘ಸಾಮಾಜಿಕ’ ರಾಜಕಾರಣಗಳ ಮುಖಾಮುಖಿಯಲ್ಲಿ ಕಾರಂತರ ಕಾದಂಬರಿಗಳ ದರ್ಶನ ರೂಪುಗೊಳ್ಳುವ ಬಗೆಯನ್ನು ಈ ಕೃತಿಯು ಚರ್ಚಿಸುತ್ತದೆ. ಕೃತಿನಿಷ್ಠ ಮತ್ತು ಸಂಸ್ಕೃತಿಸ್ಪಂದಿ ವಿಮರ್ಶೆಗಳ ನಡುವಿನ ಒಳಸಂಬಂಧವನ್ನು ಹೆಣೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...
READ MORE