ಹಿಂದೂ ಎಂದರೇನು? ನಾರಾಯಣ ಶೇವಿರೆ ಅವರ ಕೃತಿಯಾಗಿದೆ. ಹಿಂದೂ ಎಂಬ ಪದವು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದೆ. ಈ ಪದಕ್ಕೆ ಭಾರತೇತರ ಭಾಷೆಗಳ ನಿಘಂಟುಗಳಲ್ಲಿ ಹೀನಾರ್ಥವಿದೆ ಎಂದು ಕರ್ನಾಟಕದ ರಾಜಕಾರಣಿಯೊಬ್ಬರು ಹೇಳಿದ್ದು ಸುದ್ದಿಗೆ ಗ್ರಾಸವಾಗಿತ್ತು. ನಿಜಕ್ಕೂ ಹಿಂದೂ ಎಂಬ ಪದದ ಅರ್ಥವೇನು? ಅದಕ್ಕೆ ಅಸಭ್ಯ ಅಥವಾ ಅಸಹ್ಯ ಅರ್ಥವಿದೆಯೆ? ಅದನ್ನು ಆರ್ಯರು ಹುಟ್ಟುಹಾಕಿದರೆ? ಅಥವಾ ಹೊರಗಿನಿಂದ ಬಂದ ಪರದೇಶೀಯರು ಟಂಕಿಸಿದರೆ? ಹಿಂದೂ ಎಂಬ ಶಬ್ದ ಒಂದು ನದಿಗೆ ಅಥವಾ ಪ್ರಾಂತ್ಯಕ್ಕೆ ಸೀಮಿತವೆ? ಆ ಶಬ್ದವನ್ನು ತೀರ ಇತ್ತೀಚೆಗೆ ಸಾವರ್ಕರ್ ಸೃಷ್ಟಿಸಿದರೆ? ಇತ್ಯಾದಿ ಹತ್ತುಹಲವು ಪ್ರಶ್ನೆಗಳಿಗೆ ಉತ್ತರ ಕೊಡುವ ನಿಟ್ಟಿನಲ್ಲಿ ರಚನೆಯಾಗಿರುವ ಪುಟ್ಟ ಕೃತಿ “ಹಿಂದೂ ಎಂದರೇನು?” ಇದು ಬಹುಚರ್ಚಿತ ಪದದ ಅರ್ಥ-ವಿವರಣೆಗಳ ಜಿಜ್ಞಾಸೆಯನ್ನು ಎಲ್ಲ ಕೋನಗಳಿಂದ ಮಾಡುತ್ತದೆ.
ಲೇಖಕ ನಾರಾಯಣ ಶೇವಿರೆ ಮೂಲತಃ ಮಂಗಳೂರಿನವರು. ಪ್ರಸ್ತುತ, ಹರಿಹರಪುರದಲ್ಲಿ ವಾಸವಾಗಿದ್ದಾರೆ. ಬರವಣಿಗೆ, ಓದು ಅವರ ಆಸಕ್ತಿ ಕ್ಷೇತ್ರ. ಕೃತಿಗಳು :ಅವಿಖ್ಯಾತ ಸ್ವರಾಜ್ಯ ಕಲಿಗಳು. ...
READ MORE