ಸಾಂಸ್ಕೃತಿಕ ಅಧ್ಯಯನ

Author : ರಹಮತ್ ತರೀಕೆರೆ

Pages 208

₹ 200.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಸಾಹಿತ್ಯ, ಭಾಷೆ, ಚರಿತ್ರೆ, ಸಮಾಜಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಸಾಂಸ್ಕೃತಿಕ ಅಧ್ಯಯನ ಕೈಗೊಳ್ಳುವ ಹೊಸ ತಲೆಮಾರಿನ ಸಂಶೋಧಕರಿಗೆ, ಅಧ್ಯಯನ ವಿಧಾನ ಕಂಡುಕೊಳ್ಳುವಾಗ ನೆರವಾಗಲೆಂದು ರೂಪಿಸಿದ ಕೃತಿಯಿದು.

ಇಲ್ಲಿ ‘ಸಂಸ್ಕೃತಿ’ ಕುರಿತಂತೆ ಇರುವ ವಿವಿಧ ಚಿಂತನೆ, ಪರಿಕಲ್ಪನೆ ಹಾಗೂ ವಾಗ್ವಾದಗಳ ಚರಿತ್ರೆಯಿದೆ; ಬೇರೆ ಬೇರೆ ದೇಶದ ಚಿಂತನೆಗಳು ಕನ್ನಡದ ಸಂಸ್ಕೃತಿ ಚಿಂತಕರ ಹಾಗೂ ಸಾಂಸ್ಕೃತಿಕ ಅಧ್ಯಯನಕಾರರ ಮೇಲೆ ಬೀರಿರುವ ಪ್ರಭಾವದ ಚರ್ಚೆಯಿದೆ. ಕನ್ನಡದಂತಹ ಜೀವಂತ ಭಾಷೆಯ ವಿದ್ವತ್ ಪರಂಪರೆಯಲ್ಲಿ, ಯಾವುದೇ ಪ್ರಭಾವ ಮತ್ತು ಪ್ರೇರಣೆಗಳು, ಮರವೊಂದು ಕೆಳಗಿನ ನೆಲದ ಮೇಲೆ ನೆರಳು ಚೆಲ್ಲಿದಂತೆ ಸರಳವೂ ಏಕಮುಖವೂ ಆಗಿರುವುದಿಲ್ಲ. ಅವು ಅಧ್ಯಯನಕಾರರ ದರ್ಶನ, ಆಶಯ ಮತ್ತು ವರ್ತಮಾನದ ತುರ್ತುಗಳಿಗೆ ಅನುಸಾರವಾಗಿ ಮರುಹುಟ್ಟು ಪಡೆಯುತ್ತವೆ.

ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ನಡೆದ ಸಂಸ್ಖೃತಿ ವಾಗ್ವಾದ ಹಾಗೂ ಸಾಂಸ್ಖೃತಿಕ ಅಧ್ಯಯನಗಳಲ್ಲಿ ಸಂಭವಿಸಿದ ಮರುಹುಟ್ಟು, ಅವುಗಳ ವಿಶಿಷ್ಟತೆ ಮತ್ತು ಬಹುರೂಪಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.ಈ ಗ್ರಂಥದಲ್ಲಿ ಒಟ್ಟು ಎಂಟು ಅಧ್ಯಾಯಗಳಿವೆ. ‘ಸಂಸ್ಕೃತಿ’ ಹಾಗೆಂದರೇನು? ಎಂಬುದರ ಚರ್ಚೆ ಮೊದಲನೇ ಅಧ್ಯಾಯದಲ್ಲಿವೆ. ನಂತರದ ಅಧ್ಯಾಯಗಳಲ್ಲಿ ಪ್ರಮುಖ ಸಂಸ್ಕೃತಿ ಚಿಂತಕರು, ಕನ್ನಡ ಸಂಸ್ಕೃತಿ ಚಿಂತನೆಯ ನೆಲೆಗಳು, ಸಾಂಸ್ಕೃತಿಕ ಅಧ್ಯಯನ ಎಂದರೇನು? ಸಾಂಸ್ಕೃತಿಕ ಅಧ್ಯಯನ ಕೆಲವು ಮಾದರಿಗಳು, ಕೆಲವು ಸಾಂಸ್ಕೃತಿಕ ಪರಿಕಲ್ಪನೆಗಳು, ಕನ್ನಡ ಸಾಂಸ್ಕೃತಿಕ ಅಧ್ಯಯನದ ಚಹರೆಗಳು, ಈಚಿನ ಬೆಳವಣಿಗೆ ಮತ್ತು ಹೊಸ ಸಾಧ್ಯತೆ.

ಈ ಪುಸ್ತಕದ ಉದ್ದೇಶ, ಕನ್ನಡದಲ್ಲಿ ಸಾಂಸ್ಕೃತಿಕ ಅಧ್ಯಯನಗಳು ಉದ್ದಕ್ಕೂ ಹೇಗೆ ನಡೆದುಬಂದಿವೆ ಹಾಗೂ ಈಗ ಹೇಗೆ ಹೊಸ ಹೊಸ ತಿರುವು ಪಡೆದುಕೊಂಡು ನಡೆಯುತ್ತಿವೆ ಎಂಬ ಚರಿತ್ರೆಯನ್ನು ಸರಳವಾಗಿ ದಾಖಲಿಸುವುದೇ ಹೊರತು ಯಾವುದಾದರೂ ಸಂಶೋಧನ ವಿಷಯ ಆರಿಸಿಕೊಂಡು ಸಾಂಸ್ಕೃತಿಕ ಅಧ್ಯಯನ ಹೇಗೆ ಮಾಡಬಹುದು ಎನ್ನುವ ವಸ್ತು ವಿಷಯವನ್ನು ಚರ್ಚಿಸುತ್ತದೆ. 

ಕರ್ನಾಟಕ ಸಾಹಿತ್ಯ ಅಕಾಡೆಮಿ ’ಸಾಹಿತ್ಯ ಪರಿಭಾಷಿಕ ಮಾಲೆ’ಯಲ್ಲಿ ಪ್ರಕಟಿಸಿದ್ದ ಈ ಕೃತಿಯನ್ನು ಅಭಿನವ ಪ್ರಕಾಶನ  ಮರುಮುದ್ರಣ ಮಾಡಿದೆ. 

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books