ನುಡಿಯಾಟ- ಡಾ. ಮಲ್ಲಿಕಾರ್ಜುನ ಹಿರೇಮಠ ಅವರ ವಿಮರ್ಶಾತ್ಮಕ ಲೇಖನಗಳ ಸಂಕಲನ. ಪ್ರಕಾರ ಕೇಂದ್ರಿತ ವಿಮರ್ಶೆ ಸಮಸ್ಯೆ ಮತ್ತು ಸವಾಲುಗಳು, ಕೇಶವಾಂಕಿತ ರಚನೆಗಳು ಹಾಗೂ ತತ್ವ ರಾಜಕಾರಣ, ಸರ್ವಜ್ಞಾನಿಂಕಿತ ತ್ರಿಪದಿಗಳು ಒಬ್ಬನ ರಚನೆಗಳಲ್ಲ, ಅಲ್ಲಮನ ಕುರಿತ ಆಧುನಿಕ ಪೂರ್ವ ಅನುಸಂಧಾನಗಳು, ಹೊಸ ಕನ್ನಡ: ಮಹಿಳಾ ಕಾವ್ಯ:ಪ್ರತಿರೋಧದ ನೆಲೆಗಳು, ಕಿರಂ ಅವರ ವಿಮರ್ಶೆಯ ಉಪಕ್ರಮ ಹೀಗೆ ವಿವಿಧ ವಿಷಯ ಸ್ವರೂಪಗಳ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ.
ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು. ‘ಅಮೀನಪುರದ ಸಂತೆ, ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು. ಅವರ ಸಾಹಿತ್ಯ ಸೇವೆಗೆ ‘ಕನಾಟಕ ...
READ MORE