ನಿರಂತರ-ಕನ್ನಡದ ಖ್ಯಾತ ವಿಮರ್ಶಕ ಜಿ.ಎಸ್. ಆಮೂರ ಅವರ ವಿಮರ್ಶೆ ಲೇಖನಗಳ ಸಂಗ್ರಹ ಕೃತಿ. ರಾಘವಾಂಕನ ಹರಿಶ್ಚಂದ್ರ ಚಾರಿತ್ಯ್ರ: ಹೊಸ ಓದು, ಆಧುನಿಕತೆ: ಕನ್ನಡ ಕಾವ್ಯ ಮತ್ತು ನಾಟಕ, ಆಧುನಿಕ ಕನ್ನಡ ಕಾದಂಬರಿ ಮತ್ತು ಸಮೀಕ್ಷೆ, ಹುಯಿಲಗೋಳ ನಾರಾಯಣರ ಕಾವ್ಯ, ಕೈಲಾಸಂ ಅವರ ಕನ್ನಡ ನಾಟಕಗಳು: ಒಂದು ಸಾಂಸ್ಕೃತಿಕ ಓದು, ರಾಮಾಐಣ ಮತ್ತು ಮಹಾಭಾರತ: ಮಾಸ್ತಿಯವರ ಚಿಂತನೆಯ ಆಧುನಿಕತೆ, ಬೇಂದ್ರೆ ಅವರ ಜೀವನ ಪ್ರಜ್ಞೆ: ಎರಡು ಲೇಖನಗಳು, ವಿನಾಯಕ ಕೃಷ್ಣ ಗೋಕಾಕ: ಸಾಧನೆ ಮತ್ತು ಪ್ರಸ್ತುತತೆ, ಕವಲು ಮತ್ತು ಬೆಳ್ಳಕ್ಕಿ: ಸು.ರಂ. ಎಕ್ಕುಂಡಿ ಅವರ ಬಕುಲದ ಹೂವುಗಳು, ರಾಘವೇಂದ್ರ ಪಾಟೀಲರ ಕಥಗಳಲ್ಲಿ ಪರಂಪರೆ ಮತ್ತು ಪ್ರಯೋಗ, ಅಮೆರಿಕೆಯಲ್ಲಿ ಕನ್ನಡ ಕಾದಂಬರಿ, ಭಾರತೀಯ ಪರಂಪರೆ, ಹೊಸ ಚಿಂತನೆ: ಮುನ್ನುಡಿ...ಹೀಗೆ ಗಂಭೀರ ವಿಷಯಗಳನ್ನು ಎತ್ತಿಕೊಂಡು ವಿವಿಧ ಲೇಖಕರ ವಿಚಾರಗಳನ್ನು ವಿಮರ್ಶೆ ಗೆ ಒಳಪಡಿಸಿದ್ದು, ಈ ಕೃತಿಯ ಹೆಚ್ಚುಗಾರಿಕೆ. ಕೃತಿ ಮೊದಲ ಅಧ್ಯಯನವಾಗಿ ‘ನಾನು ಮತ್ತು ನನ್ನ ಪರಿಸರ’ ಲೇಖನವಿದ್ದು, ತಮ್ಮ ಬಾಲ್ಯ, ಓದು ನೆನಪಿಸುವ ಒಂದು ರೀತಿಯ ಆತ್ಮಕಥನವಾಗಿದೆ.
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE