ಕನ್ನಡ ಕಥನ ಸಾಹಿತ್ಯ: ಸಣ್ಣಕತೆ -ಈ ಕೃತಿಯು ಜಿ.ಎಸ್. ಆಮೂರರ ವಿಮರ್ಶೆ ಪ್ರೌಢಿಮೆಗೊಂದು ಮಾದರಿ. ವಿಮರ್ಶೆಯು ಇಲ್ಲಿ ಸಮತೂಕ ಕಾಯ್ದುಕೊಂಡಿದೆ. ಕನ್ನಡದಲ್ಲಿ ಸಣ್ಣ ಕಥೆಗಳನ್ನು, ಕಥೆಗಾರರನ್ನು ಗುರುತಿಸಿ , ವಿಮರ್ಶೆಯ ಒಳನೋಟದ ಸ್ಪರ್ಶ ನೀಡಿದ್ದು ಈ ಕೃತಿಯ ಹೆಗ್ಗಳಿಕೆ. ಮಾಸ್ತಿ, ಆನಂದ, ಆನಂದ ಕಂದ, ಬೇಂದ್ರೆ, ಕುವೆಂಪು,ಸೇಡಿಯಾಪು, ನಿರಂಜನ, ಚದುರಂಗ, ಕಟ್ಟಿಮನಿ, ಅ.ನ.ಕೃ ಹೀಗೆ ಇತರೆ ಸಾಹಿತಿಗಳ ಕಥೆಗಳನ್ನು ವಿಮರ್ಶೆಗೆ ಒಳಪಡಿಸಿ, ಅವುಗಳ ಪ್ರಸ್ತುತತೆ, ಸಾಹಿತ್ಯಕ ಮೌಲ್ಯವನ್ನು ಲೇಖಕರು ಒರೆಗೆ ಹಚ್ಚುತ್ತಾರೆ. ಮಾತ್ರವಲ್ಲ; ಆಧುನಿಕ ಕಥೆಗಳನ್ನೂ ಸಹ ಅವರು ತಮ್ಮ ವಿಮರ್ಶೆಯ ಮಾನದಂಡದಿಂದ ಕನ್ನಡದ ಸಮಗ್ರ ಸಣ್ಣಕತೆಗಳನ್ನು ಒಂದು ವಿಶಾಲ ಚೌಕಟ್ಟಿನಡಿ ತರಲು ಯತ್ನಿಸುವ ಮೂಲಕ ಕನ್ನಡದ ಕಥಾವಲಯದ ಗಟ್ಟಿತನವನ್ನು ವಿಶ್ಲೇಷಿಸಿದ್ದಾರೆ. ಕನ್ನಡ ಸಣ್ಣಕತೆಗಳ ಪಾರಂಪಾರಿಕ ವಿಸ್ತಾರವನ್ನು ಕಾಣಿಸುತ್ತಾರೆ.
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE