ವಿಮರ್ಶಕ ಜಿ.ಎಸ್. ಆಮೂರ ಅವರ ವಿಮರ್ಶಾತ್ಮಕ ಲೇಖನಗಳ ಸಂಕಲನ-ಹಿಂಗಾರು. ದೇಶೀಯತೆ, ದೇಶೀಯವಾದ - ವಿ.ಸೀ, ಅವರ ಬೆಲೆಬಾಳುವ ಬರೆಹಗಳು 'ಮೈಸೂರು ಮಲ್ಲಿಗೆ'ಯಲ್ಲಿ ಶೃಂಗಾರ ಭೈರಪ್ಪನವರ 'ಕವಲು' ಕಾದಂಬರಿಯಲ್ಲಿ ಕಾನೂನು ಮತ್ತು ನ್ಯಾಯ ಶಂಕರ ಮೊಕಾಶಿ ಪುಣೇಕರ : ಅಪರೂಪದ ಕಾದಂಬರಿಕಾರ ಸೂರ್ಯನ ಕುದುರೆ : ಪ್ರಸ್ತಾವನೆ - ಕನ್ನಡ ಕಥನ ಸಾಹಿತ್ಯದಲ್ಲಿ ಯಶವಂತ ಚಿತ್ತಾಲರ ಸಾಧನೆ ಎಂ.ಎಸ್.ಕೆ. ಪ್ರಭು ಅವರ “ಚಿಲ್ಲಿ : ಒಂದು ನೋಟ ಖಾಸನೀಸರ ಕತೆಗಳು ಮಹಾಬಲಮೂರ್ತಿಯವರ ಆಯ್ದ ಕತೆಗಳು : ಪ್ರಸ್ತಾವನೆ ಗಿರೀಶ ಕಾರ್ನಾಡರ 'ಪೂವು' ಎಸ್. ದಿವಾಕರರ 'ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ' ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ 'ಅಂತಂಗದ ಮೃದಂಗ' : ಪ್ರಸ್ತಾವನೆ ವಾಮನ ಬೇಂದ್ರೆಯವರ 'ಹೃದಯಗೀತ'ಕ್ಕೆ ಒಂದು ಸ್ಪಂದನ ಗ.ಸು. ಭಟ್ಟರ 'ನಲ ದಮಯಂತಿ” ನಿಂಗಪ್ಪ ಮುದೇನೂರರ 'ಕಡಲಕವಿತೆ' : ಮುನ್ನುಡಿ “ಕುವಲಯ ಕಂಡ ಆಂದ” ಮನೋಹರ ಮಾಳಗಾಂವಕರ : ಒಂದು ನೆನಪು ಅಪರೂಪದ ಶಿಲ್ಪಿ, ಚಿತ್ರಕಾರ ರಾಮಚಂದ್ರಪ್ಪ ಬೀಳಗಿ : ಒಂದು ನೆನಪು, ಮೂರು ಚಿಂತನೆಗಳು ಹೀಗೆ ವಿವಿಧ ಅಧ್ಯಾಯಗಳು ಈ ಕೃತಿಯಲ್ಲಿ ಒಳಗೊಂಡಿವೆ.
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE