ಡಾ. ನಾ. ಮೊಗಸಾಲೆ ಅವರ ಕಾದಂಬರಿಗಳ ಲೋಕವನ್ನು ವಿಮರ್ಶೆ ಮಾಡಿರುವ ಕೃತಿ. ಅವರ ಹರಿತವಾದ ಲೋಕವೀಕ್ಷಣ ಸಾಮರ್ಥ್ಯ, ಪಾತ್ರ ಚಿತ್ರಣದಲ್ಲಿ ಮಾನಸಿಕ ದೂರವನ್ನು ಕಾಪಾಡಿಕೊಳ್ಳಬಲ್ಲ ಸ್ಥಿತಪ್ರಜ್ಞತೆ – ಇವುಗಳನ್ನು ತಮ್ಮ ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ ಲೇಖಕ ಎಸ್. ಪಿ. ಪದ್ಮಪ್ರಸಾದ್. ಮೊಗಸಾಲೆ ಅವರ ಕಾದಂಬರಿಗಳನ್ನು ಹೆಚ್ಚೆಚ್ಚು ಅರ್ಥಮಾಡಿಕೊಳ್ಳಲು ಈ ಪ್ರಬಂಧಗಳು ಸಹಾಯಕವಾಗುತ್ತವೆ.
ಎಸ್.ಪಿ. ಪದ್ಮಪ್ರಸಾದ್ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮ ಪ್ರಸಾದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ. ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್ನಿಂದ ಬಿ.ಇಡಿ. ಪದವಿಯನ್ನೂ,. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂದ ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ...
READ MORE