ಈ ದಶಕದಲ್ಲಿ (೧೯೯೧-೨೦೦೦) ಪ್ರಕಟವಾದ ಸೃಜನ ಮತ್ತು ಸೃಜನೇತರ ಸಾಹಿತ್ಯ ಪ್ರಕಾರಗಳ ಸಮೀಕ್ಷಾ ಬರಹಗಳು ಈ ಕೃತಿಯಲ್ಲಿದ್ದು ಸಮೀಕ್ಷಾ ಬರಹಗಳು ವಿಮರ್ಶಾ ಬರಹ ಗಳಾಗಿ ಈ ಕೃತಿಯಲ್ಲಿ ಅಕ್ಷರರೂಪ ಪಡೆದಿದೆ. ಈ ಕೃತಿಯು ಒಳಗೊಂಡಿರುವ ಅಂಶಗಳೆಂದರೆ: ಕಾವ್ಯ; ಸಣ್ಣಕಥೆ, ಕಾದಂಬರಿ , ಆತ್ಮಕಥೆ; ಜೀವನ ಚರಿತ್ರೆ , ಲಲಿತ ಪ್ರಬಂಧ; ಸಾಹಿತ್ಯ ವಿಮರ್ಶ , ಮಕ್ಕಳ ಸಾಹಿತ್ಯ; ಪ್ರವಾಸ ಸಾಹಿತ್ಯ; ಅಂಕಣ ಸಾಹಿತ್ಯ , ಗ್ರಂಥ ಸಂಪಾದನೆ, ಸಂಶೋಧನೆ , ಅನುವಾದ , ಜಾನಪದ , ಭಾಷೆ, ಕೋಶ ರಚನೆ, ಛಂದಸ್ಸು , ನಾಟಕ; ಅಭಿನಂದನಾ ಗ್ರಂಥಗಳು; ವಿಚಾರ ಸಾಹಿತ್ಯ , ಸಾಂಸ್ಕೃತಿಕ ಚಿಂತನೆ; ಮಾನವಿಕ ವಿಜ್ಞಾನ; ಸಾಹಿತ್ಯ ಲಲಿತ ಕಲೆಗಳು
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ್ರಪ್ರತಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕ ಮತ್ತು ಮುಖ್ಯಸ್ಥರು. ಎಂ.ಎ, ಎಂಫಿಲ್ ಪಿಎಚ್.ಡಿ ಪದವಿ ಪಡೆದಿರುವ ಅವರಿಗೆ ಹಸ್ತಪ್ರತಿ-ಗ್ರಂಥಸಂಪಾದನೆ, ಹಾಲುಮತ ಸಂಸ್ಕ್ರತಿ, ಹಳೆಗನ್ನಡ-ನಡುಗನ್ನಡ -ನಡುಗನ್ನಡ ಸಾಹಿತ್ಯ, ಯೋಗವಿಜ್ಞಾನ ಆಸಕ್ತಿಯ ಅಧ್ಯಯನದ ಕ್ಷೇತ್ರಗಳು. ’ಕೆರೆಯ ಪದ್ಮರಸ ಮತ್ತು ಆತನ ವಂಶಜರು , ಕಂಠಪತ್ರ (1,2,3), ಹಾಲುಪತ್ರ’ ಪ್ರಕಟಿತ ಕೃತಿಗಳು. ಹಾಲುಮಠ ಅಧ್ಯಯನ ಪೀಠದ ಸಂಚಾಲಕ, ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುನ್ನತ ಸಂಶೋಧನಾ ಗ್ರಂಥ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ಇವರಿಗೆ ...
READ MORE