ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ್ರಪ್ರತಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕ ಮತ್ತು ಮುಖ್ಯಸ್ಥರು. ಎಂ.ಎ, ಎಂಫಿಲ್ ಪಿಎಚ್.ಡಿ ಪದವಿ ಪಡೆದಿರುವ ಅವರಿಗೆ ಹಸ್ತಪ್ರತಿ-ಗ್ರಂಥಸಂಪಾದನೆ, ಹಾಲುಮತ ಸಂಸ್ಕ್ರತಿ, ಹಳೆಗನ್ನಡ-ನಡುಗನ್ನಡ -ನಡುಗನ್ನಡ ಸಾಹಿತ್ಯ, ಯೋಗವಿಜ್ಞಾನ ಆಸಕ್ತಿಯ ಅಧ್ಯಯನದ ಕ್ಷೇತ್ರಗಳು.
’ಕೆರೆಯ ಪದ್ಮರಸ ಮತ್ತು ಆತನ ವಂಶಜರು , ಕಂಠಪತ್ರ (1,2,3), ಹಾಲುಪತ್ರ’ ಪ್ರಕಟಿತ ಕೃತಿಗಳು. ಹಾಲುಮಠ ಅಧ್ಯಯನ ಪೀಠದ ಸಂಚಾಲಕ, ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುನ್ನತ ಸಂಶೋಧನಾ ಗ್ರಂಥ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ಇವರಿಗೆ ದೊರೆತಿವೆ.