ಡಾ.ಸಣ್ಣರಾಮ ಅವರು ಕಥೆಗಾರರರಾಗಿ, ಸಂಶೋಧಕರಾಗಿ, ವೈಚಾರಿಕ ಬರಹಗಾರರಾಗಿ ಕನ್ನಡ ಸಾಹಿತ್ಯಕ್ಕೆ ಕಾಣಿಕೆಯನ್ನು ನೀಡಿದ್ದಾರೆ. ಈ ಕೃತಿಯ ಮೂಲಕ ಕನ್ನಡದ ಆಚೆಗೂ ಅವರು ಕೈಚಾಚಿರುವುದು ಮಹತ್ವದ ಸಂಗತಿಯಾಗಿದೆ. ಬಂಗಾಳಿ ಭಾಷೆಯ ಆಧುನಿಕ ಲೇಖಕರಲ್ಲಿ ಬಂಕಿಮಚಂದ್ರರು ಪ್ರಖ್ಯಾತರು. ರವೀಂದ್ರನಾಥ ಠಾಗೂರರ ಸಮಕಾಲೀನರಾಗಿ ಅಪಾರ ಪಾಂಡಿತ್ಯವನ್ನು ಮೆರೆದಿದ್ದ ಬಂಕಿಮರು ಪ್ರಭಾವಶಾಲಿ ಬಂಗಾಳಿ ಕಾದಂಬರಿಕಾರರು. ಬಂಗಾಳಿ ಭಾಷೆಯಲ್ಲಿ ತಲ್ಲಣವನ್ನುಂಟುಮಾಡಿದ್ದ ವಿಷವೃಕ್ಷ ಮತ್ತು ಆನಂದಮಠ ಕಾದಂಬರಿಗಳ ಕುರಿತು ಡಾ.ಸಣ್ಣರಾಮ ಅವರು ಈ ಕೃತಿಯಲ್ಲಿ ಅರ್ಥಪೂರ್ಣವಾಗಿ ವಿಮರ್ಶೆಯನ್ನು ಮಾಡಿದ್ದಾರೆ.
ಪ್ರೊ. ಸಣ್ಣರಾಮ ಅವರು 1954 ಮೇ 03 ಶಿವಮೊಗ್ಗ ಜಿಲ್ಲೆಯ, ಸೊರಬ ತಾಲೂಕಿನ ಕೋಟಿಪುರ ತಾಂಡದಲ್ಲಿ ಜನಿಸಿದರು. ಅಕ್ಷರಲೋಕದ ಪರಿಚಯವಿಲ್ಲದ ಕುಟುಂಬದಿಂದ ಬಂದ ಸಣ್ಣರಾಮ, ಎಂ. ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದಲೂ, ಪಿಹೆಚ್.ಡಿ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯದಿಂದ ಪಡೆದರು. ಒಟ್ಟು 35 ವರ್ಷಗಳು ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ಧಾರೆ. ಸುದೀರ್ಘ ಸೇವಾವಧಿಯಲ್ಲಿ ಅಧ್ಯಯನ, ಅಧ್ಯಾಪನ, ಸಂಶೋಧನೆಯಲ್ಲಿ ಕ್ರಿಯಾಶೀಲರಾಗಿದ್ದ ಸಣ್ಣರಾಮ ಅವರು 13 ಜನ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಹೆಚ್‍ಡಿ ಪದವಿ, 4 ಜನ ವಿದ್ಯಾರ್ಥಿಗಳಿಗೆ ಎಂ.ಫಿಲ್ ಪದವಿ ಮಾರ್ಗದರ್ಶನ ನೀಡಿದ್ದಾರೆ. ಕರ್ನಾಟಕ ಸರ್ಕಾರ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಣ್ಣರಾಮ ...
READ MORE