ಅಲಮೇಲಮ್ಮನ ಶಾಪ-ಒಂದು ಶವ ಪರೀಕ್ಷೆ-ಈ ಕೃತಿಯನ್ನು ಪ್ರೊ. ಪಿ.ವಿ. ನಂಜರಾಜ ಅರಸು ಅವರು ರಚಿಸಿದ್ದಾರೆ. ‘ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ದೊರೆಗಳಿಗೆ ಮಕ್ಕಳಾಗದಿರಲಿ’ -ಹೀಗೆ ಮೈಸೂರು ಅರಸರಿಗೆ ಒಂದು ಶಾಪವಿತ್ತಂತೆ; ಶಾಪ ನೀಡಿದವಳು-ದೇವತೆ ಅಲಮೇಲಮ್ಮ. ಈ ಕುರಿತ ಒಂದು ವಿಶ್ಲೇಷಣಾತ್ಮಕ ಬರೆಹ ಇಲ್ಲಿದೆ. ಅದಕ್ಕಾಗಿ ‘ಒಂದು ಶವ ಪರೀಕ್ಷೆ ’ ಎಂಬ ಉಪಶೀರ್ಷಿಕೆಯನ್ನು ನೀಡಲಾಗಿದೆ.
ಮೈಸೂರು ನಿವಾಸಿಯಾಗಿರುವ ಡಾ. ಪಿ.ವಿ. ನಂಜರಾಜ ಅರಸು ಅವರು ಸದಾ ಹೊಸತನಕ್ಕೆ ತುಡಿಯುವವರು. ಬರವಣಿಗೆ, ಚಲನಚಿತ್ರ ನಿರ್ಮಾಣ, ನಿರ್ದೇಶನ, ಇತಿಹಾಸ ಅಧ್ಯಯನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಆಸಕ್ತರಾಗಿದ್ದರೆ, ಅವರು ನಿರ್ಮಿಸಿ ಮತ್ತು ನಿರ್ದೇಶಿಸಿದ 'ಸಂಕಲ್ಪ' (1974) ಚಲನಚಿತ್ರವು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸೇರಿದಂತೆ ಏಳು ರಾಜ್ಯ ಪ್ರಶಸ್ತಿಗಳನ್ನು ಗಳಿಸಿತ್ತು. ಪೋಸ್ಟ್ ಮಾಸ್ಟರ್, ಚೌಕದ ದೀಪ, ತೂಗುದೀಪ, ಮಂಜು ಮುಸುಕಿದ ಹಾದಿ ಚಿತ್ರಗಳ ಜೊತೆಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಸಂಪಿಗೆ ಅರಳಿತು, ಟೀ ನಂತರದ ಕಪು, ಸಾಸರ್, ಮೋಡದ ನೆರಳು (ಕಥಾ ಸಂಕಲನಗಳು), ಹೊಸಿಲ ಬಳಿ, ಕಳೆದುಹೋದವರು (ಕಾದಂಬರಿಗಳು), ತ್ರಿಶಂಕುವಿನ ಮಕ್ಕಳು (ಕಿರುಕಾದಂಬರಿ), ನೀಲಿ ತೊರೆ, ಒಂದು ...
READ MORE