ಮೈಸೂರು ನಿವಾಸಿಯಾಗಿರುವ ಡಾ. ಪಿ.ವಿ. ನಂಜರಾಜ ಅರಸು ಅವರು ಸದಾ ಹೊಸತನಕ್ಕೆ ತುಡಿಯುವವರು. ಬರವಣಿಗೆ, ಚಲನಚಿತ್ರ ನಿರ್ಮಾಣ, ನಿರ್ದೇಶನ, ಇತಿಹಾಸ ಅಧ್ಯಯನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಆಸಕ್ತರಾಗಿದ್ದರೆ, ಅವರು ನಿರ್ಮಿಸಿ ಮತ್ತು ನಿರ್ದೇಶಿಸಿದ 'ಸಂಕಲ್ಪ' (1974) ಚಲನಚಿತ್ರವು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸೇರಿದಂತೆ ಏಳು ರಾಜ್ಯ ಪ್ರಶಸ್ತಿಗಳನ್ನು ಗಳಿಸಿತ್ತು.
ಪೋಸ್ಟ್ ಮಾಸ್ಟರ್, ಚೌಕದ ದೀಪ, ತೂಗುದೀಪ, ಮಂಜು ಮುಸುಕಿದ ಹಾದಿ ಚಿತ್ರಗಳ ಜೊತೆಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಸಂಪಿಗೆ ಅರಳಿತು, ಟೀ ನಂತರದ ಕಪು, ಸಾಸರ್, ಮೋಡದ ನೆರಳು (ಕಥಾ ಸಂಕಲನಗಳು), ಹೊಸಿಲ ಬಳಿ, ಕಳೆದುಹೋದವರು (ಕಾದಂಬರಿಗಳು), ತ್ರಿಶಂಕುವಿನ ಮಕ್ಕಳು (ಕಿರುಕಾದಂಬರಿ), ನೀಲಿ ತೊರೆ, ಒಂದು ಕೊಂಪೆಯ ಪ್ರಕರಣ, ಗೆಸ್ಟ್ ಹೌಸಿನಲ್ಲಿ ಒಂದು ರಾತ್ರಿ, ತ್ರಿಶಂಕು (ನಾಟಕಗಳು), ಕನ್ನಡ ಮತ್ತು ಹಿಂದಿ ಜನಪದ ಗೀತೆಗಳು (ಸಂಪ್ರಬಂಧ), ಮೈಸೂರು ನೂರಿನ್ನೂರು ವರ್ಷದ ಹಿಂದೆ (ಇತಿಹಾಸ), ನಾಲ್ವಡಿ ಕೃಷ್ಣರಾಜ ಒಡೆಯರ್ - ಒಂದು ದರ್ಶನ, ಮರೆಯಲಾರದ ಮಹಾಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್ (ಚಾರಿತ್ರಿಕ ದಾಖಲೆ), ಅಲಮೇಲಮ್ಮನ ಶಾಪ-ಒಂದು ಶವಪರೀಕ್ಷೆ ಕನ್ನಂಬಾಡಿ ಕಟ್ಟೆಯ ಆತ್ಮಕಥೆ (ಸಂಶೋಧನೆ) ಪ್ರಕಟಿತ ಕೃತಿಗಳು.