ವಿಶ್ಲೇಷಣೆ

Author : ಎಚ್.ಎಸ್. ರಾಘವೇಂದ್ರರಾವ್

Pages 150

₹ 100.00




Year of Publication: 1981
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

’ವಿಶ್ಲೇಷಣೆ’ ಕೃತಿಯು ಎಚ್.ಎಸ್. ರಾಘವೇಂದ್ರರಾವ್ ಅವರ ಲೇಖನಗಳ ಸಂಗ್ರಹ. ತಮ್ಮ ವಿಮರ್ಶೆ, ಲೇಖನಗಳ ಮೂಲಕ ರಾಘವೇಂದ್ರರಾವ್ ವಿಮರ್ಶಾ ಶಿಸ್ತನ್ನು ರೂಪಿಸಿಕೊಂಡು ಬೆಳೆಯುತ್ತಾ ಬಂದಿದ್ದಾರೆಂಬುದಕ್ಕೆ ಈ ಕೃತಿಯಲ್ಲಿನ ಲೇಖನಗಳೇ ಸಾಕ್ಷಿಯಾಗಿದೆ.

ಕನ್ನಡ ವಿಮರ್ಶಾ ವಲಯಕ್ಕೆ ವಿವಿಧ ಜ್ಞಾನಶಾಖೆಗಳ ಮೂಲಕ ಹೊಸ ಪರಿಕಲ್ಪನೆಗಳ ಪರಿಚಯವಾಗಿ ವಿಮರ್ಶೆಗೆ ಹೆಚ್ಚು ಸಾಮರ್ಥ್ಯವುಳ್ಳ ನೆಲೆಗಟ್ಟು ರೂಪುಗೊಳ್ಳಬೇಕೆಂಬ ಲೇಖಕರ ಆಸಕ್ತಿ ಸಹಜವಾಗಿಯೇ ಆ ದಿಕ್ಕಿನಲ್ಲಿ ತಕ್ಕ ಮಾರ್ಗಗಳನ್ನು ಹುಡುಕಿಕೊಂಡಿದೆ. ಮನೋವಿಜ್ಞಾನ ಹಾಗೂ ಭಾಷಾವಿಜ್ಞಾನಗಳ ಪರಿಚಯದಿಂದ ಹಾಗೂ ಅವುಗಳಿಂದ ಲಭಿಸಿದ ಸಾಹಿತ್ಯಕ ಮಾನದಂಡಗಳಿಂದ ಅವರ ವಿಮರ್ಶೆಯ ಹೊಸದಾದ ನೆಲೆಗಳನ್ನು ಹುಡುಕಲು ಸಾಧ್ಯವಾಗಿರುವುದನ್ನು ಇಲ್ಲಿನ ಅವರ ಲೇಖನಗಳು ಸೂಚಿಸುತ್ತವೆ.

About the Author

ಎಚ್.ಎಸ್. ರಾಘವೇಂದ್ರರಾವ್
(01 August 1948)

ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...

READ MORE

Related Books