ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಡಿ.ವಿ.ಜಿ., ಮಾಸ್ತಿ, ಮೂರ್ತಿರಾವ್, ಅಡಿಗ ಅವರಿಂದ ಮೊದಲುಗೊಂಡು ಗಿರಡ್ಡಿ ಗೋವಿಂದರಾಜ ಮತ್ತು ಕೆ.ವಿ. ತಿರುಮಲೇಶ್ ವರೆಗೆ ಪ್ರಮುಖ ಲೇಖಕರ ಬರಹಗಳ ಬಗ್ಗೆ ಈ ಕೃತಿಯಲ್ಲಿ ಚರ್ಚಿಸಿಲಾಗಿದೆ. ವಿಮರ್ಶೆಯ ಬರಹಗಳನ್ನು ಕೇಂದ್ರವಾಗಿಟ್ಟುಕೊಂಡು ಆಮೂಲಕ, ಸಾಹಿತ್ಯದ ಚರ್ಚೆ ಮತ್ತು ಅವಲೋಕನ ನಡೆಯುವ ಬಗೆಯನ್ನು ಇಲ್ಲಿನ ಲೇಖನಗಳು ಸರಳವಾಗಿ ಉದಾಹರಣೆಗಳ ಸಮೇತ, ಓದುಗರಿಗೆ ಮನದಟ್ಟು ಮಾಡುವಂತಿವೆ.