ವಿಮರ್ಶೆಯ ಹೊಳೆ ಸಂಪುಟ-2

Author : ಮಾಧವ ಕುಲಕರ್ಣಿ

₹ 384.00




Year of Publication: 2021
Published by: ಆದಿತ್ಯ ಪಬ್ಲಿಕೇಷನ್ಸ್
Address: ಬೆಳಗಾವಿ
Phone: 9902791799

Synopsys

‘ವಿಮರ್ಶೆಯ ಹೊಳೆ ಸಂಪುಟ-2’ ಕೃತಿಯು ವಿಮರ್ಶಾ ಸಂಕಲನವಾಗಿದೆ. ಮಾಧವ ಕುಲಕರ್ಣಿ ಅವರು ಕನ್ನಡ ಸಾಹಿತ್ಯ ಕೃತಿಗಳ ವಿಮರ್ಶೆಗಳನ್ನು ವಿವಿಧ ಪತ್ರಿಕೆಗಳಲ್ಲಿ, ನಿಯತಾಕಾಲಿಕೆಗಳಲ್ಲಿ, ಗ್ರಂಥಗಳಲ್ಲಿ ನಿರಂತರವಾಗಿ ಬರೆದುಕೊಂಡು ಬಂದವರು. ಕಾಲದಿಂದ ಕಾಲಕ್ಕೆ ಬರೆದ ವಿಮರ್ಶೆಗಳು ಮೂರು ಸಂಪುಟಗಳಲ್ಲಿ ಅಡಕಗೊಂಡಿದ್ದು, ಆ ಸರಣಿಯ ಎರಡನೆಯ ಸಂಪುಟದಲ್ಲಿ ಕಾದಂಬರಿಗಳ ವಿಮರ್ಶೆ ಸಂಕಲನಗೊಂಡಿವೆ. ಕನ್ನಡ ಕಾದಂಬರಿ ಪ್ರಪಂಚದ ಮೌಲ್ಯ ಮಾಪನ ಪ್ರಕ್ರಿಯೆಯಲ್ಲಿ ಇದೊಂದು ಐತಿಹಾಸಿಕ ದಾಖಲೆ. ಈ ಸಂಪುಟದಲ್ಲಿ 44 ಕನ್ನಡ ಕಾದಂಬರಿಗಳ ವಿಮರ್ಶೆಗಳಿವೆ ಎಂದು ಗಮನಿಸಿದಾಗ ಈ ಪುಸ್ತಕದ ಮಹತ್ವ ಅರಿವಾದೀತು. ಶಿವರಾಮ ಕಾರಂತರ ಮರಳಿ ಮಣ್ಣಿಗೆ, ಅಳಿದ ಮೇಲೆ, ಮೈಮನಗಳ ಸುಳಿಯಲ್ಲಿ ಸೇರಿದಂತೆ 15 ಕಾದಂಬರಿಗಳ ವಿಮರ್ಶೆ ಈ ಕೃತಿಯಲ್ಲಿದೆ.

About the Author

ಮಾಧವ ಕುಲಕರ್ಣಿ
(01 June 1946 - 26 March 2023)

ಲೇಖಕ, ವಿಮರ್ಶಕ ಮಾಧವ ಕುಲಕರ್ಣಿ ಅವರು ಈಗಿನ ಗದಗ ಜಿಲ್ಲೆ ಮತ್ತು ಆಗಿನ ಧಾರವಾಡ ಜಿಲ್ಲೆಯವರು. ಪ್ರಾಥಮಿಕ ಶಿಕ್ಷಣದಿಂದ ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಪೂರೈಸಿರುವ ಅವರು ಹೈಸ್ಕೂಲು ಶಿಕ್ಷಣವನ್ನು ವಿದ್ಯಾದಾನ ಸಮಿತಿ ಹೈಸ್ಕೂಲು ಗದಗದಲ್ಲಿ ಪೂರ್ಣಗೊಳಿಸಿದ್ದಾರೆ. ತಂದೆ ಎ.ವಿ. ಕುಲಕರ್ಣಿ ಗದುಗಿನ ಮುನ್ಸಿಪಲ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಅಲ್ಲದೇ ಹೈಸ್ಕೂಲು ಶಿಕ್ಷಣದಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕೆ.ಎಸ್.ಎಸ್. ಅಯ್ಯಂಗಾರ್ ಅವರ ಆಡಳಿತ ಕ್ರಮ ಮತ್ತು ಶಿಸ್ತು ನನ್ನ ಮೇಲೆ ಪ್ರಭಾವ ಬೀರಿದವು ಎನ್ನುತ್ತಾರೆ ಮಾಧವ ಕುಲಕರ್ಣಿ. ಗದುಗಿನ ಜೆ.ಟಿ. ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ 1968ರಲ್ಲಿ ಸ್ನಾತಕೋತ್ತರ ...

READ MORE

Related Books