ವಿಮರ್ಶೆಯ ದಾರಿ-2 - ಇದು ಹಿಂದೆ ಪ್ರಕಟವಾಗಿರುವ ವಿಮರ್ಶೆಯ ದಾರಿ ಭಾಗ-1 ಕೃತಿಗೆ ಪೂರಕವಾದ ಕೃತಿ. ಈ ಕೃತಿಯಲ್ಲಿ ಸುಮಾರು 12 ಲೇಖನಗಳಿದ್ದು, ಕನ್ನಡ ವಿಮರ್ಶೆಯ ದಾರಿಯಲ್ಲಿ ಪ್ರಮುಖವಾದ ಕೆಲವು ಹೆಜ್ಜೆ ಗುರುತುಗಳನ್ನು ತೋರಿಸುವುದು ಈ ಸಂಕಲನದ ಉದ್ದೇಶವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ 17ನೇ (1988-1992) ಅಧ್ಯಕ್ಷರಾಗಿದ್ದ ಜಿ.ಎಸ್.ಸಿದ್ಧಲಿಂಗಯ್ಯ, ವಚನ ಸಾಹಿತ್ಯ ವಿದ್ವಾಂಸರು, ಶಿಕ್ಷಣ ತಜ್ಞರು, ಕವಿಗಳು ಆಗಿದ್ದರು. ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ 1931 ರ ಫೆ. 20 ರಂದು ಜನನ. ಮೈಸೂರು ವಿ.ವಿ. ಮಹಾರಾಜ ಕಾಲೇಜಿನಿಂದ ಬಿ.ಎ. ಮೈಸೂರು ವಿ.ವಿ.ಯಿಂದ 1961ರಲ್ಲಿ ಎಂ.ಎ. ಪದವೀಧರರು. ಸರ್ಕಾರಿ ಕಾಲೇಜಿನ ಅಧ್ಯಾಪಕ-ಪ್ರಾಧ್ಯಾಪಕ-ಪ್ರಾಂಶುಪಾಲರಾಗಿ ನಂತರ 1988 ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು. ವಿಮರ್ಶೆ : ಮಹಾನುಭಾವ ಬುದ್ಧ, ಕವಿ ಲಕ್ಷ್ಮೀಶ, ಚಾಮರಸ, ಹೊಸಗನ್ನಡ ಕಾವ್ಯ, ಕವನ ಸಂಕಲನ : ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಹಾಗೂ ಸಂಪಾದನೆ ...
READ MORE