ವಸಾಹತುಶಾಹಿ ಅನುಭವ ಎಂದರೆ ಪಾಶ್ಚಿಮಾತ್ಯ ವೈಚಾರಿಕತೆಯ ಸ್ವೀಕಾರ, ತಿರಸ್ಕಾರ, ಸಮನ್ವಯ, ರೂಪಾಂತರ ಇತ್ಯಾದಿ ಮಿಶ್ರ ಪ್ರತಿಕ್ರಿಯೆಗಳು ಇಡೀ ಆಧುನಿಕ ಕನ್ನಡ ಸಾಹಿತ್ಯ-ಸಂಸ್ಕೃತಿಗಳನ್ನು ಒಂದು ವಿಶಿಷ್ಟ ರೀತಿಯಲ್ಲಿ ರೂಪಿಸಲಾಗಿದೆ. ವಸಾಹತುಶಾಹಿ ವೈಚಾರಿಕತೆಯ ಆಕರ್ಷಣೆ-ವಿಕರ್ಷಣೆಗಳು, ವಸಾಹತೋತ್ತರ ಚಿಂತನೆಗೆ ಒಂದು ಶಿಸ್ತು ಬದ್ದ ತಾತ್ವಿಕ ತಳಹದಿಯನ್ನು ಕೊಟ್ಟು, ಅದನ್ನೊಂದು ಪ್ರಮುಖ ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯಿಕ ವಿಶ್ಲೇಷಣೆಯ ಪ್ರಸ್ಥಾನವನ್ನಾಗಿ ರೂಪಿಸಿದ ಬಗೆಯನ್ನು ಒಳಗೊಂಡಂತೆ ರಾಷ್ಟ್ರೀಯ ಪ್ರಜ್ಞೆಯನ್ನು ಮತ್ತು ರಾಷ್ಟ್ರೀಯ ಸ್ವಾತಂತ್ಯ್ರ ಚಳವಳಿಗಳನ್ನು ತನ್ನದೇ ಕೊಡುಗೆಯೆಂದು ವಸಾಹತುಶಾಹಿ ವಾದಿಸುತ್ತದೆ.
ವಸಾಹತುಶಾಹಿಯು ಅಧೀನ ರಾಷ್ಟ್ರಗಳಿಗೆ ಆದುನಿಕ ಶಿಕ್ಷಣದ ಮೂಲಕ ಆಧುನಿಕ ವೈಚಾರಿಕೆಯನ್ನು ಮತ್ತು ಅದರ ಪರಿಣಾಮವಾದ ರಾಷ್ಟ್ರೀಯ ಪ್ರಜ್ಞೆಯನ್ನು ನೀಡಿದ ಹಿನ್ನೆಲೆಯಲ್ಲಿ ವಸಾಹತೋತ್ತರ ಚಿಂತನೆ, ನೂತನ ಆಯಾಮಗಳು ಮತ್ತು ಪ್ರತಿಕ್ರಿಯೆಗಳು , ಪೂರ್ವ ವಸಾಹತು ರಾಷ್ಟ್ರಗಳು ಮತ್ತು ಇಂಗ್ಲಿಷ್ ಚಿಂತನೆ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಅಂಶಗಳನ್ನು ’ವಸಾಹತೋತ್ತರ ಚಿಂತನೆ’ ಕೃತಿ ಒಳಗೊಂಡಿದೆ.
ಖ್ಯಾತ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜ ಅವರ ಸಂಪಾದನೆಯಲ್ಲಿ ಹೊರತರಲಾದ ಸಾಹಿತ್ಯ ಪಾರಿಭಾಷಿಕ ಪುಸ್ತಕ ಮಾಲೆ ಸರಣೆಯಲ್ಲಿ ’ವಸಾಹತೋತ್ತರ ಚಿಂತನೆ ’ ಕೃತಿಯನ್ನು ಲೇಖಕ, ವಿಮರ್ಶಕರಾದ ಡಾ. ಸಿ.ಎನ್. ರಾಮಚಂದ್ರನ್ ಅವರು ರಚಿಸಿದ್ದಾರೆ.
ರಾಮಚಂದ್ರನ್ ಅವರು ಜನಿಸಿದ್ದು (ಜ ೧೯೩೬) ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಅಮೆರಿಕೆಯ ಮಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೬ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಧ್ಯಾಪಕರಾಗಿ ನಿವೃತ್ತಿ. ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ರಕ್ತ-ರೂಪಣೆ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು ವಿಮರ್ಶಾ ಕೃತಿಗಳು. ಶೋಧ ಕಾದಂಬರಿ, ಕಸಾಂದ್ರ ಕಥಾ ಸಂಕಲನ. ಇನಾಂದಾರ್ ಪ್ರಶಸ್ತಿ, ...
READ MORE