‘ವೈಚಾರಿಕತೆ ಮತ್ತು ಸಾಂಸ್ಕೃತಿಕ ರಾಜಕಾರಣ’ ಪ್ರೊ.ಡಿ.ಅಂಜನಪ್ಪ ಚಳ್ಳಕೆರೆ ಅವರ ವಿಮರ್ಶಾ ಲೇಖನಗಳ ಸಂಕಲನ. ಇಂದಿನ ಬದುಕಿನಷ್ಟೇ ಸಾಹಿತ್ಯವೂ ಸಂಕೀರ್ಣಗೊಂಡಿದೆ. ಅದು ಅನೇಕ ವೈಚಾರಿಕ ಸಂಘರ್ಷಗಳನ್ನು ಎದುರಿಸುತ್ತಿದೆ. ಇದರಲ್ಲಿ ಸಾಂಸ್ಕೃತಿಕ ರಾಜಕಾರಣದ ಪಾತ್ರ ಅತ್ಯಂತ ಮಹತ್ವದ್ದು, ಇದು ಸಾಹಿತ್ಯ ಮತ್ತು ಬದುಕಿನ ಎಲ್ಲ ಆಯಾಮಗಳನ್ನು ತನ್ನ ಹಸ್ತಕ್ಷೇಪ ಮಾಡುತ್ತಲೇ ಬಂದಿರುವುದು ಕಂಡುಂಡ ಅನುಭವವೇ ಆಗಿದೆ. ಅದು ನಮ್ಮಲ್ಲಿ ಅನೇಕ ತಲ್ಲಣಗಳನ್ನು ಮೂಡಿಸುತ್ತದೆ ಎನ್ನುತ್ತಾರೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ.
ಈ ಕೃತಿಗೆ ಬೆನ್ನುಡಿ ಬರೆದಿರುವ ಅವರು ಪ್ರೊ. ಡಿ. ಅಂಜನಪ್ಪ ಚಳ್ಳಕೆರೆ ಅವರು ಸೂಕ್ಷ್ಮಮನಸ್ಸಿನ ವಿಮರ್ಶರು ಎನ್ನುತ್ತಾರೆ. ಇಲ್ಲಿಯ ಲೇಖನಗಳು ಕನ್ನಡ ಜಗತ್ತು ಎದುರಿಸುತ್ತಿರುವ ಬಿಕ್ಕಟ್ಟುಗಳೊಂದಿಗೆ ಮಹಿಳೆಯ ಅಧಿಕಾರ ಮತ್ತು ಭಾಷೆಯನ್ನು ಕುರಿತ ಲೇಖನದ ನೋಟಗಳು ಹೊಸತನದಿಂದ ಕೂಡಿವೆ.
ಪ್ರೊ. ಡಿ.ಅಂಜನಪ್ಪ ಚಳ್ಳಕೆರೆ ಅವರು ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದವರು. ಪ್ರಾಥಮಿಕ, ಮಾಧ್ಯಮಿಕ ಮತ್ತು ಪದವಿ ಶಿಕ್ಷಣವನ್ನು ಚಳ್ಳಕೆರೆಯಲ್ಲಿ ಪೂರೈಸಿದರು. ಪ್ರೌಢಶಾಲಾ ಶಿಕ್ಷಣವನ್ನು ಪರಶುರಾಂಪುರದಲ್ಲಿ ಅಭ್ಯಸಿಸಿದರು. ಕನ್ನಡ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಈಗ ಚಳ್ಳಕರಯ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ ನಿರ್ವಹಿಸುತ್ತಿದ್ದಾರೆ. ಕನ್ನಡದ ವಿಶಿಷ್ಟ ಓದುಗರಾಗಿರುವ ಅವರು ಈಗಾಗಲೇ ಇವರ ‘ಒಡಲ ಭಾಷೆ (2014), ವೈಚಾರಿಕತೆ ಮತ್ತು ಸಾಂಸ್ಕೃತಿಕ ರಾಜಕಾರಣ, ಕಾರಣ ಮೀಮಾಂಸೆ (2017), ;ವಿಮರ್ಶೆಯ ವಿವೇಕ’ ಎಂಬ ನಾಲ್ಕು ಕೃತಿಗಳು ಪ್ರಕಟವಾಗಿವೆ. ...
READ MORE