ಕನ್ನಡದ ಮೊದಲ ಗದ್ಯ ಗ್ರಂಥ ವಡ್ಡಾರಾಧನೆ. ಅದನ್ನು ಮುಖಾಮುಖಿಯಾಗಿ ಹೊಸ ಓದಿಗೆ ಅನುವು ಮಾಡಿಕೊಡುವ ಲೇಖನ/ವಿಮರ್ಶಾ ಬರಹಗಳಿವೆ. ಅವುಗಳ ಪರಿವಿಡಿ ಹೀಗಿದೆ- ವಡ್ಡಾರಾಧನೆ : ಆಧುನಿಕ ಓದು, ವಡ್ಡಾರಾಧನೆ : ಕಥನ ಸ್ವರೂಪ , ವಡ್ಡಾರಾಧನೆ : ಲೌಕಿಕ ಅಧಿಕಾರ ಮತ್ತು ಮಧ್ಯಕಾಲೀನ ಜೈನ ಮತ, ವಡ್ಡಾರಾಧನೆ : ಸ್ತ್ರೀವಾದಿ ನೆಲೆಯಲ್ಲಿ, ವಡ್ಡಾರಾಧನೆ : ನನ್ನ ಓದು, ವಡ್ಡಾರಾಧನೆ ಕಥೆಗಳು : ಶಿಷ್ಟ ದೃಷ್ಟಿಯ ಫಲ, ವಡ್ಡಾರಾಧನೆ : ಸಾಮಾನ್ಯ ಮನುಷ್ಯನ ಓದು, ವಡ್ಡಾರಾಧನೆ : ಸಾಂಸ್ಕೃತಿಕ ವಿಚಾರಗಳು,. ವಡ್ಡಾರಾಧನೆ : ಸಮಾನತೆ ಮತ್ತು ಪಾಪಪ್ರಜ್ಞೆ ಎಂಬ ಜ್ವಾಲೆ. ಈ ಕೃತಿಯನ್ನು ಇಂದು ಸಾಹಿತ್ಯದ ಆಧುನಿಕ ಗ್ರಹಿಕೆಯ ನೆಲೆಯಲ್ಲಿ ನಿಂತು ಅಧ್ಯಯನ ಮಾಡಲಾಗಿದ್ದು, ವಡ್ಡಾರಾಧನೆಯನ್ನು ಗ್ರಹಿಸಲು ಹೊಚ್ಚ ಹೊಸದಾದ ಹಲವು ಆಯಾಮಗಳನ್ನು ಈ ಕೃತಿಯಲ್ಲಿನ ಲೇಖನಗಳು ತೋರಿಸುತ್ತವೆ. ಚಾರಿತ್ರಿಕ, ಸಾಹಿತ್ಯಕ, ಜಾನಪದೀಯ, ಮಹಿಳಾ ದೃಷ್ಟಿ, ಕೆಳಜಾತಿ ಕೆಳವರ್ಗಗಳ ನೆಲೆಗಳು, ಪ್ರಭುತ್ವದ ನೆಲೆ... ಇವೇ ಮುಂತಾದ ಹಲವು ದೃಷ್ಟಿಕೋನಗಳಿಂದ ವಡ್ಡಾರಾಧನೆ ಯನ್ನು ಈ ಕೃತಿಯಲ್ಲಿ ವಿಮರ್ಶಿಸಲಾಗಿದೆ.
ಡಾ.ಬಿ. ಎಂ. ಪುಟ್ಟಯ್ಯ ಅವರು ಎಂ.ಎ ಕನ್ನಡ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಅಲಕ್ಷಿತ ವಚನಕಾರರ ಲೋಕದೃಷ್ಟಿ ಎಂಬ ವಿಷಯದ ಮೇಲೆ ಎಂ. ಫಿಲ್ ಪದವಿ ಪಡೆದರು. ಕನ್ನಡ ದಲಿತ ಸಾಹಿತ್ಯ ಮತ್ತು ಪ್ರತಿ ಸಂಸ್ಕ್ರತಿ ಎಂಬ ವಿಷಯದ ಮೇಲೆ ಪಿಎಚ್.ಡಿ ಪದವಿಯನ್ನು 1998 ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಪಡೆದರು. ಪ್ರಸ್ತುತ ಕನ್ನಡ ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ವಿಮರ್ಶೆ, ಸಾಹಿತ್ಯ ಸಂಶೋಧನೆ, ಸಂಸ್ಕ್ರತಿ ಅಧ್ಯಯನ, ಶಿಕ್ಷಣ ಆರ್ಥಿಕತೆ ಹಾಗೂ ರಾಜಕೀಯ ಅಧ್ಯಯನಗಳು, ಹೋರಾಟ ಚಳುವಳಿ ಹಾಗೂ ...
READ MORE