ವಚನ ಭಾಷೆ ಮತ್ತು ಇತರ ಲೇಖನಗಳು

Author : ನಾಗರಾಜ ದೊರೆ

Pages 102

₹ 120.00




Year of Publication: 2019
Published by: ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮು ಕಲಬುರಗಿ-585101
Phone: 9448124431

Synopsys

’ವಚನ ಭಾಷೆ ಕೃತ”ಯಲ್ಲಿ ಒಟ್ಟು ಎಂಟು ಲೇಖನಗಳಿವೆ. ಅದರಲ್ಲಿ ಮೂರು ಬಸವಣ್ಣನವರ ಭಾಷಾ ರಾಚನಿಕ ಪ್ರಕ್ರಿಯೆಗೆ ಸಂಬಂಧ ಪಟ್ಟವು. ಶರಣರು ವಚನ ಸಾಹಿತ್ಯ ಕುರಿತಂತೆ ಸಾಂಪ್ರದಾಯಿಕ ಬರಹದಿಂದ ವಿಭಿನ್ನವಾದ ವಚನ ಸಾಹಿತ್ಯವನ್ನು ರಚಿಸಿದ್ದಾರೆ. ಈ ವಚನಗಳ ಭಾಷೆಯ ಸ್ವರೂಪದ ಬಗ್ಗೆ ಅಧ್ಯಯನ ಮಾಡಿ ವಚನ ಭಾಷೆ ಕುರಿತಂತೆ ಅವರ ವೈಜ್ಞಾನಿಕ ಚಿಂತನೆಗೊಳಪಡಿಸುವ ಕೃತಿ. ಇನ್ನುಳಿದ ಲೇಖನಗಳೂ ನೃಪತುಂಗನ ಅಚ್ಚಗನ್ನಡ ಸಗರನಾಡಿನ ಭಾಷಾವೈಶಿಷ್ಟಗಳ ವಿಶ್ಲೇಷಣೆಯಲ್ಲಿ ಹೊಸ ಹೊಳವುಗಳನ್ನು ಮೂಡಿಸುವಂತಾಗಿವೆ. ಅಲ್ಲಿಯ ಆಡು ಭಾಷೆ, ಶಿಶುಭಾಷೆ, ಶಾಸನ ಭಾಷೆ ಕುರಿತು ಡಾ. ನಾಗರಾಜ ದೊರೆ ವಿಶ್ಲೇಷಿಸಿದ್ದಾರೆ. ಇಲ್ಲಿಯ ಲೇಖನಗಳು ಭಾಷಾಶಾಸ್ತ್ರ ವಿಸ್ತರಣೆಗೆ ದಿಕ್ಸೂಚಿ.

 

About the Author

ನಾಗರಾಜ ದೊರೆ
(01 August 1987)

ಲೇಖಕ ನಾಗರಾಜ ದೊರೆ, ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರದವರು. ಹುಟ್ಟಿದ್ದು 1987 ಆಗಸ್ಟ್ 01 ರಂದು. ಪ್ರಸ್ತುತ ಅಥಿತಿ ಉಪನ್ಯಾಸಕರಾಗಿ ಯಾದಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾಷಾಶಾಸ್ತ್ರ ದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಅವರ ಮೊದಲ ಕೃತಿ ’ವಚನ ಭಾಷೆ ಮತ್ತು ಇತರ ಲೇಖನಗಳು’ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯಕ್ಕೆ ಆಯ್ಕೆಯಾಗಿದೆ. ...

READ MORE

Related Books