ಉಲಿವ ಮರ

Author : ಶಾಂತರಸ ಹೆಂಬೇರಾಳು

Pages 346

₹ 80.00




Year of Publication: 2007
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಬಸವಪೂರ್ವ ಯುಗದ ಶರಣರನ್ನು ಕುರಿತು ಇಲ್ಲಿನ ಲೇಖನಗಳಲ್ಲಿ ವೈಚಾರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿಂತನೆಗಳನ್ನುನೀಡಲಾಗಿದೆ. ಶರಣೆಯರ ಸಾಹಿತ್ಯದ ಕೊಡುಗೆ ಯನ್ನು ಅವರ ಸಾಂಸ್ಕೃತಿಕ ಕಾಣಿಕೆಯನ್ನು ಇಲ್ಲಿನ ಹಲವು ಲೇಖನಗಳಲ್ಲಿ ಪ್ರಸ್ತಾಪಿಸಲಾಗಿದೆ. ಆಳವಾದ ಚಿಂತನೆ, ಸೂಕ್ಷ್ಮ ಅವಲೋಕನ ಮತ್ತು ತೌಲನಿಕ ಗುಣಗಳಿಂದ ಇಲ್ಲಿಯ ಬರಹಗಳು ಮಧ್ಯಕಾಲೀನ ಸಾಹಿತ್ಯ ವಿಮರ್ಶಾ ಲೋಕಕ್ಕೆ ಮಹತ್ವದ್ದಾಗಿದೆ. ಈ ಕೃತಿಯಲ್ಲಿರುವ ಅಧ್ಯಾಯಗಳೆಂದರೆ: ಬಸವಪೂರ್ವಯುಗ , ಶಿವಶರಣರಲ್ಲಿ 'ಮಾರಯ್ಯ'ಗಳು ,ಬಹುರೂಪಿ ಚೌಡಯ್ಯ: ಮರುಳ ಶಂಕರದೇವರು; ವಚನಕಾರಮಾದಾರಚನ್ನಯ್ಯ , ನಾಡವರ ಭಾವಶುದ್ದಗೈದ ಮಹಂತ: ಸತ್ಯನಿಷ್ಠ ವೀರಭಕ್ತ ತೆಲುಗು ಜೊಮ್ಮಯ್ಯ; ಡಕ್ಕೆಯ ಬೊಮ್ಮಣ್ಣ; ನಗೆಯ ಮಾರಿತಂದೆ; ಲಿಂಗಮ್ಮ ,ಶರಣರ ಧರ್ಮಕ್ಕೆ ಮೊದಲಿಗೆ ರಾಜಾಶ್ರಯವಿತ್ತ ಸುಗ್ಗಲೆ; ಶರಣ ಧರ್ಮಕ್ಕೆ ಉಸಿರಿ ದುಗ್ಗಳೆ ,ಹರಿಹರನ ಗದ್ಯ; ಹರಿಹರನ ಕಾವ್ಯಗಳಲ್ಲಿ ಕಂಡುಬರುವ ಭಕ್ತಿ ಮತ್ತು ಕಾಯಕ , ಶರಣ ಸತಿ ಲಿಂಗ ಪತಿ; ಶೂನ್ಯಸಂಪಾದನೆಯ ಪಾತ್ರ ವೈಶಿಷ್ಟ್ಯ: ಶರಣರೂ ಕಲೆಗಳು

About the Author

ಶಾಂತರಸ ಹೆಂಬೇರಾಳು
(07 April 1924 - 13 April 2008)

ಕಾವ್ಯ-ಕಥೆ-ಕಾದಂಬರಿ-ಸಂಶೋಧನೆ-ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಹೆಂಬೇರಾಳು ಶಾಂತರಸ ಅವರ ನಿಜನಾಮ ಶಾಂತಯ್ಯ. 1924ರ ಏಪ್ರಿಲ್ 7ರಂದು ಜನಿಸಿದರು. ತಂದೆ ಚೆನ್ನಬಸವಯ್ಯ- ತಾಯಿ ಸಿದ್ಧಲಿಂಗಮ್ಮ. ಬಾಲ್ಯದ ವಿದ್ಯಾಭ್ಯಾಸ ಉರ್ದು ಮಾಧ್ಯಮದಲ್ಲಿ ಸಿರಿವಾರ, ಮುಷ್ಟೂರು, ಗುಲ್ಬರ್ಗ, ರಾಯಚೂರು, ಲಾತೂರುಗಳಲ್ಲಿ ನಡೆಯಿತು. 1939ರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ಶಾಲೆಯಿಂದ ಹೊರದೂಡಲಾಗಿತ್ತು. ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (1985), ರಾಜ್ಯ ನಾಟಕ ಅಕಾಡಮಿಯ ಫೆಲೋಷಿಪ್ (1993), ವಿದ್ಯಾವರ್ಧಕ ಸಂಘದ ಬಹುಮಾನ (1985), ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ (1997) ಮೊದಲಾದವು ಇವರಿಗೆ ಲಭಿಸಿದೆ. ಬೀದರ್ ನಲ್ಲಿ ನಡೆದ ...

READ MORE

Related Books