’ತಿಳಿಯಲು ಎರಡೆಂಬುದಿಲ್ಲ’ ಕವಿತಾ ರೈ ಅವರ ನಾಲ್ಕನೇ ವಿಮರ್ಶಾ ಕೃತಿ. ವಿಮರ್ಶಾ ಸಾಹಿತ್ಯಕ್ಕೆ ಇದೊಂದು ವಿಶಿಷ್ಟ ಕೊಡುಗೆ. ಯುರೋಪು, ಭಾರತೀಯ ಎನ್ನುವ ಸಂಸ್ಕೃತ ಪದಪದಾರ್ಥಗಳನ್ನು ಬಳಸಿ ನಡೆಸುತ್ತಾ ಬಂದ ಲೋಕವ್ಯಾಖ್ಯಾನಗಳಲ್ಲಿ ಕನ್ನಡದ ಬದುಕು ಊನಗೊಂಡಂತೆ ಕಾಣುತ್ತದೆ. ಕವಿತಾ ಅವರ ಈ ನಿರೂಪಣೆಗಳು ಕೂಡ ಅಂತಸ್ಥವಾಗಿ ಇಂತಹದೇ ಅನುಮಾನಗಳನ್ನು ಹುದುಗಿಸಿಕೊಂಡಿರುವ ಬರಹಗಳಾಗಿವೆ. ಕಳೆದ ದಶಕದ ಕನ್ನಡ ಕಥನವನ್ನು ವಿವರಿಸುವ ಲೇಖನದಲ್ಲಿ ಇಂತಹ ಬೌದ್ಧಿಕ ತಳಮಳಗಳಿರುವುದನ್ನು ಗಮನಿಸಬಹುದು. ತಾನು ಆಡುವ ಮಾತಿನ ಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಕವಿತಾ ನಡೆಸಿರುವ ವೈಚಾರಿಕ ಸಿದ್ಧತೆ, ವಿಸ್ತಾರವಾದ ಓದು ಬೆರಗು ಹುಟ್ಟಿಸುವಂತಿದೆ. ಹಲವು ಜ್ಞಾನ ಶಿಸ್ತುಗಳ ತಿಳಿವನ್ನು ಬಳಸಿಯೂ ನಿರೂಪಣೆಯಲ್ಲಿ ರಮಣೀಯತೆಯನ್ನು ಕಾಯ್ದುಕೊಂಡಿರುವುದು ಈ ಬರಹಗಳ ಹೆಗ್ಗಳಿಕೆಯಾಗಿದೆ. ಕನ್ನಡ-ತುಳು-ಕೊಡವ ಜೀವನ ಕ್ರಮಗಳಿಂದ ಪಡೆದ ಲೋಕದೃಷ್ಟಿ ಇಲ್ಲಿನ ಲೇಖನಗಳ ಚಿಂತನೆಗೆ ಒಳನೋಟವನ್ನು ನೀಡಿರುವ ಮೂಲಧಾತುವಾಗಿದೆ.
ಮಹಿಳಾ ಲೇಖಕಿ ಕವಿತಾ ರೈ ಅವರು ಮೂಲತಃ ಮಡಿಕೇರಿಯವರು. ತಾಯಿ ಬಿ.ಎಲ್.ರಾಧಾ, ತಂದೆ ಬಿ.ಎಸ್.ರಂಗನಾಥ ರೈ. ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಸಾಹಿತ್ಯದೆಡೆಗಿನ ಒಲವು ಬಾಲ್ಯದಿಂದಲೂ ಅಪಾರವಾಗಿತ್ತು. ಕನ್ನಡ ಸಾಹಿತ್ಯದಲ್ಲಿ ಇವರ ಕೊಡುಗೆಗೆ ದಿ.ವಿ.ಎಮ್. ಇನಾಂದಾರ್ ವಿಮರ್ಶಾ ಪ್ರಶಸ್ತಿ, ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ಒಲಿದುಬಂದಿದೆ. ಇವರು ಬರೆದಿರುವ ಕೃತಿಗಳೆಂದರೆ ಹಕ್ಕಿ ಹರಿವ ನೀರು, ನೀರ ತೇರು (ಕವನ ಸಂಕಲನ) , ಮಹಿಳೆ ಅಸ್ತಿತ್ವದ ಸಂಕಥನ, ಅರಿವಿನ ನಡೆ, ವಿವಾಹ ಮತ್ತು ಕುಟುಂಬ (ವೈಚಾರಿಕ) ಮುಂತಾದವು. ...
READ MOREಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ-2015 (ಸಾಹಿತ್ಯ ವಿಮರ್ಶೆ)