ತನ್ನ ತಾನರಿದೆಡೆ-ಲೇಖಕ ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರ ಸಂಶೋಧನಾತ್ಮಕ ಲೇಖನಗಳ ಕೃತಿ. ಆದಿಪುರಾಣ ಮತ್ತು ಆಧ್ಯಾತ್ಮಿಕ ನೆಲೆ. ತನ್ನ ತಾನರಿದಡೆ. ಅಂಬಿಗರ ಚೌಡಯ್ಯ ಅವರ ವೈಚಾರಿಕತೆ. ಆಧುನಿಕ ಕವಿಗಳು ಕಂಡಂತೆ ಬಸವಣ್ಣ. ವಿಶ್ವ ಜ್ಞಾನಿ ಅಂಬೇಡ್ಕರ್ ಅವರ ಲೋಕದೃಷ್ಟಿ ಮೊದಲಾದ ಲೇಖನಗಳ ಸಂಗ್ರಹವಿದು.
ಚಿತ್ರದುರ್ಗ ತಾಲೂಕು ಭರಮಸಾಗರ ಹೋಬಳಿ ನೆಲ್ಲಿಕಟ್ಟೆ ಗ್ರಾಮದಲ್ಲಿ ಸಿದ್ದಪ್ಪ ಮಾರಕ್ಕ ದಂಪತಿಯ ಮಗನಾಗಿ 1972ರ ಮಾರ್ಚ್ 4ರಂದು ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಜನಿಸಿದರು. ಬಿ.ಎ.ಪದವಿಯನ್ನು 7ನೇ ರ್ಯಾಂಕ್ ಬಿ.ಇಡಿ.ಪದವಿ ಚಿನ್ನದ ಪದಕ. ಎಂ.ಎ.ಪದವಿ 3ನೇ ರ್ಯಾಂಕ್ ಪಡೆದಿದ್ದು, ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿಗಳು-ಒಂದು ಅಧ್ಯಯನ-ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ (2004) ಪಿಎಚ್.ಡಿ.ಪದವಿ ನೀಡಿದೆ. ಬಿಸಿಲು ಮಳೆ. ಛಲಬೇಕು ಶರಣಂಗೆ. ವ್ಯಕ್ತಿತ್ತ ವಿಕಾಸ ಹಾಗೂ ಕನ್ನಡ ಸಾಹಿತ್ಯ. ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿ. ಸಿರಿಗನ್ನಡ ಜಾನಪದ. ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ. ಯುವ ಜನತೆ ಮತ್ತು ದುಶ್ಚಟಗಳು. ಸಿರಿಗನ್ನಡ ಪ್ರಾಚೀನ ಕವಿಗಳು. ಕನಕದಾಸರ ...
READ MORE