“ಸ್ತ್ರೀವಾದಿ ವಿಮರ್ಶೆ” ಲೇಖಕ ಕೆ. ಕೇಶವ ಶರ್ಮ ಅವರ ಸ್ತ್ರೀವಾದ ಕುರಿತ ವಿಮರ್ಶಾ ಲೇಖನಗಳ ಸಂಕಲನ. ಈಚಿನ ವರ್ಷಗಳಲ್ಲಿ ರೂಪುಗೊಳ್ಳುತ್ತಿರುವ ಹೊಸ ಆಲೋಚನಾಕ್ರಮ. ಪುರುಷ ಹಾಗೂ ಸ್ತ್ರೀ ನಿರ್ಮಿತ ಸಾಹಿತ್ಯದಲ್ಲಿ ಸ್ತ್ರೀಯ ಸ್ಥಾನವನ್ನು ಪರಿಭಾವಿಸುವ ಕ್ರಮ ಇದಾಗಿದೆ. ಭಾರತದಲ್ಲಿಯ ಆಂಗ್ಲರ ಆಡಳಿತ ಸಂದರ್ಭದ ಹೋರಾಟಗಳಲ್ಲಿ ಸ್ತ್ರೀಪ್ರಜ್ಞೆ ರೂಪುಗೊಂಡಿದ್ದು ಇವತ್ತಿನ ಸಾಹಿತ್ಯ ನಿರ್ಮಿತಿಯಲ್ಲಿ ಲೆಕ್ಕಿಸಬಹುದಾಗಿದೆ.
ಸಾಂಪ್ರದಾಯಿಕ ಸ್ತ್ರೀವಾದಿಗಳಿಗೂ ಇಂದಿನ ವೈಚಾರಿಕ ಸ್ತ್ರೀವಾದಿಗಳಿಗೂ ಇರುವ ಆಲೋಚನಾ ಕ್ರಮದ ಭೇದವನ್ನು ಇಲ್ಲಿ ಗುರುತಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದ ವಿಮರ್ಶೆ ಕುರಿತ ಮೊದಲ ಗಮನಾರ್ಹ ಕೃತಿ ಇದು. ಎಲ್ಲ 'ಇಸಂ'ಗಳ ಹಾಗೆ ಫೆಮಿನಿಸಂ ಕೂಡ ಪಾಶ್ಚಿಮಾತ್ಯರಿಂದಲೇ ಬಂದರೂ ಅದು ಕನ್ನಡ ಸಾಹಿತ್ಯಕ್ಕೆ ಅನ್ವಯವಾದ ರೀತಿಯನ್ನು ಡಾ. ಕೆ. ಕೇಶವ ಶರ್ಮರು ವಿವರವಾಗಿ ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...
READ MORE